ಪುತ್ತೂರು: ಕೋರ್ಟ್ ರಸ್ತೆಯ ಇಂದಿರಾ ಕ್ಯಾಂಟೀನ್ ಬಳಿಯ ಸಾರಥಿ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಪುತ್ತೂರು ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಹಿರಿಯ ವಾಹನ ಚಾಲಕ ಎಂ.ಲೀಲಯ್ಯರವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ವಾಹನ ಚಾಲಕ ಗಿರಿಧರ ಗೌಡರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಿರುವ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ಎಂ.ಲೀಲಯ್ಯರವರನ್ನು ನೂತನ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
ಸಾರಥಿ ಭವನ ಕಟ್ಟಡದ ರೂವಾರಿ ಹಾಗೂ ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮಾಜಿ ಅಧ್ಯಕ್ಷರಾದ ಕೆ.ಕಮಲಾಕ್ಷ, ಸಿ.ಸೀತಾರಾಮ್ ರವರ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಎನ್.ಬಾಲಕೃಷ್ಣ ನಾಯ್ಕ್ ಹಾಗೂ ಭಾಗೀರಥಿ ಎ ದಂಪತಿ ಪುತ್ರರಾಗಿರುವ ನೂತನ ಅಧ್ಯಕ್ಷ ಎಂ.ಲೀಲಯ್ಯರವರು 1988-89 ರಿಂದ ವಾಹನ ಚಾಲಕರ ಸಂಘದ ಸದಸ್ಯರಾಗಿದ್ದು, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆಗೈದು, ಪ್ರಸ್ತುತ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ಹಿರಿಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಲೀಲಯ್ಯರವರು ಪತ್ನಿ ಶ್ರೀಮತಿ ಕೆ.ಭಾರತಿ, ಪುತ್ರಿಯರಾದ ಶ್ರೀಮತಿ ದಿವ್ಯಶ್ರೀ ಎಂ, ಪೂಜಾಶ್ರೀ ಎಂ, ಅಳಿಯ ವಿಶಾಖ್ ರಾಜ್ ರವರೊಂದಿಗೆ ಕಾವು ಎಂಬಲ್ಲಿ ವಾಸವಾಗಿದ್ದಾರೆ.