ಹರೀಶ್ ಪೂಂಜರಿಗೆ ಮುಖಭಂಗ, ಅರ್ಜಿ ತಿರಸ್ಕೃತ ವರದಿ ನೆಗೆಟಿವ್ ಪತ್ರಿಕೋದ್ಯಮಕ್ಕೆ ಸಾಕ್ಷಿ

0

ಅಂತಹ ಪತ್ರಿಕೋದ್ಯಮಕ್ಕೆ ದೀರ್ಘ ಬಾಳ್ವಿಕೆ ಇಲ್ಲ-ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಧನಾತ್ಮಕ ಪತ್ರಿಕೋದ್ಯಮಕ್ಕೆ ಬಾಳ್ವಿಕೆ ಇದೆ. ಋಣಾತ್ಮಕ ಪತ್ರಿಕೋದ್ಯಮಕ್ಕೆ ದೀರ್ಘಕಾಲದ ಬಾಳ್ವಿಕೆ ಇಲ್ಲ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜು.6ರಂದು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ನೆಗೆಟಿವ್-ಪಾಸಿಟಿವ್ ಜರ್ನಲಿಸಂಗೆ ನಮ್ಮ ಜಿಲ್ಲೆಯಲ್ಲೇ ಉದಾಹರಣೆ ಇದೆ. ನೆಗೆಟಿವ್ ಜರ್ನಲಿಸಂ ಮಾಡಿದ ಪತ್ರಿಕೆಗಳು ಎಷ್ಟು ಬಾಳ್ವಿಕೆ ಬಂದಿವೆ? ಪಾಸಿಟಿವ್ ಜರ್ನಲಿಸಂ ಅನುಸರಿಸಿದ ಪತ್ರಿಕೆಗಳು ಎಷ್ಟು ವರ್ಷ ಇವೆ ಎಂಬುದಕ್ಕೆ ಉದಾಹರಣೆಗಳು ಇವೆ. ಪತ್ರಿಕೆಗಳು, ಮಾಧ್ಯಮಗಳು ಪಾಸಿಟಿವ್ ವ್ಯವಸ್ಥೆಯನ್ನು ಗುರುತಿಸಿದರೆ ಮಾತ್ರ ಸಮಾಜ ಅದನ್ನು ಸ್ವೀಕರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ಉಲ್ಲೇಖಿಸುತ್ತೇನೆ. ನನ್ನ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ನಾನು ಪ್ರಕರಣಕ್ಕೆ ತಡೆಯಾಜ್ಞೆ ಕೇಳಿದ್ದೆ. ಪ್ರಕರಣದಲ್ಲಿ ನನ್ನ ಜತೆ 60-70 ಮಂದಿ ಇದ್ದು, ಎಲ್ಲರಿಗೂ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗುವುದು ಕಷ್ಟವಾಗುತ್ತದೆ, ವಿನಾಯಿತಿ ಕೊಡಿ ಎಂದು ನಾನು ಕೇಳಿದ್ದೆ. ಇದನ್ನು ಪರಿಗಣಿಸಿದ ನ್ಯಾಯಾಲಯ, ನಿಮ್ಮ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಲಾಗುವುದು. ಯಾವುದೇ ಕಾರಣಕ್ಕೂ ನೀವಾಗಲಿ, ಪ್ರಕರಣದ ಇತರ ಆರೋಪಿಗಳಾಗಲಿ, ಯಾರೂ ಕೋರ್ಟಿಗೆ ಬರುವ ಅವಶ್ಯಕತೆ ಇಲ್ಲ ಎಂಬ ವಿನಾಯಿತಿಯನ್ನು ನೀಡಿ ತೀರ್ಪು ನೀಡಿತು. ಹರೀಶ್ ಪೂಂಜ ಹಾಗೂ ಇತರ ಆರೋಪಿಗಳಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿದ ಕೋರ್ಟ್ ಎಂದು ಪತ್ರಿಕೆಗಳು ಬರೆದವು. ಇನ್ನೊಂದು ಪತ್ರಿಕೆಯು ಹರೀಶ್ ಪೂಂಜರಿಗೆ ಮುಖಭಂಗ, ಅರ್ಜಿ ತಿರಸ್ಕೃತ ಎಂದು ಬರೆಯಿತು. ಇದು ಪಾಸಿಟಿವ್ ಮತ್ತು ನೆಗೆಟಿವ್ ಜರ್ನಲಿಸಂಗೆ ಉದಾಹರಣೆ. 60-70 ಮಂದಿ ಬೆಂಗಳೂರಿಗೆ ಹೋಗಿ ಬರುವುದಕ್ಕೆ ಕೋರ್ಟ್ ರಿಲೀಫ್ ನೀಡಿದೆ. ತುಂಬಾ ಒಳ್ಳೆಯ ಕೆಲಸ ಆಯಿತು ಎಂದು ಪಾಸಿಟಿವ್ ಜರ್ನಲಿಸಂ ಪತ್ರಿಕೆಯನ್ನು ಜನರು ನೋಡಿ ನನಗೆ ಕರೆ ಮಾಡಿ ತಿಳಿಸಿದರು ಎಂದು ಹರೀಶ್ ಪೂಂಜ ಹೇಳಿದರು .

1) ಲಂಚ, ಭ್ರಷ್ಟಾಚಾರದ ವಿರುದ್ಧ ಶಾಸಕ ಹರೀಶ್ ಪೂಂಜರ ಹೋರಾಟಕ್ಕೆ ಈಗಾಗಲೇ ಸುದ್ದಿ ಜನಾಂದೋಲನ ವೇದಿಕೆ ಬೆಂಬಲ ಘೋಷಿಸಿದ್ದು ಗ್ರಾಮ ಗ್ರಾಮಗಳಲ್ಲಿ, ಇಲಾಖೆಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮಾಡಲಾಗುವುದು.

2) ಶಾಸಕರು, ಸಂಸದರು, ಜಿಲ್ಲಾ ಮಂತ್ರಿಗಳು ಪ್ರತೀ ತಿಂಗಳು ಮಾಡುವ ಕೆಲಸವನ್ನು ಜನತೆ ಕೇಳುವಂತೆ ಮಾಡುತ್ತಿದ್ದೇವೆ. ಅವರು ಮಾಡಬೇಕಾದ ಕೆಲಸದ ಪಟ್ಟಿಯನ್ನು ಮತದಾರ ರಾಜರಾದ ಜನರು ಅವರಿಗೆ ನೀಡುವಂತೆಯೂ ಮಾಡುತ್ತಿದ್ದೇವೆ.
ಈ ಆಂದೋಲನದ ಪರಿಣಾಮವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಜನಪ್ರತಿನಿಧಿಯಾಗಿ (ಜನಸೇವಕರಾಗಿ) ತಾಲೂಕು ಕಚೇರಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಲು ಪ್ರಾರಂಭಿಸಿದ್ದಾರೆ. ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಇಲಾಖೆಗಳ ಅಧಿಕಾರಿಗಳಿಗೆ ಕೆಲಸವನ್ನು ಪರಿಶೀಲಿಸಿ ಬಿಸಿ ಮುಟ್ಟಿಸುತ್ತಿದ್ದಾರೆ. ರಸ್ತೆಗಿಳಿದು ಕಾಮಗಾರಿಗಳನ್ನು, ಗುಂಡಿಗಳನ್ನು ಪರಿಶೀಲಿಸುತ್ತಿದ್ದಾರೆ. ರಸ್ತೆ ಜರಿಯುವ ಕಡೆಗಳಿಗೆ ಭೇಟಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಇಲ್ಲದಿರುವ ಬವಣೆಯನ್ನು ವಿಚಾರಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ, ಮಾದ್ಯಮಗಳಲ್ಲಿ ಬರುವ ಜನರ ಬೇಡಿಕೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಮತ್ತು ಲಂಚ, ಭ್ರಷ್ಟಾಚಾರದ ವಿರುದ್ಧ ಕೊನೆಗೂ ಧ್ವನಿ ಎತ್ತುತ್ತಿದ್ದಾರೆ. ಪೂಂಜರು ಶಾಸಕರಾಗಿ ಎಷ್ಟೋ ಜನಪರ ಕೆಲಸ ಮಾಡಿರಬಹುದು, ಆದರೆ 6 ವರ್ಷಗಳಲ್ಲಿ ಮಾಡದ ಹಲವು ಜನಪರ ಕೆಲಸಗಳನ್ನು ಈಗ ಮಾಡುತ್ತಿದ್ದಾರೆ. ಪೂಂಜರು ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಪ್ರತಿಜ್ಞೆ ಮಾಡಿ ತಿಂಗಳಾಗಿದೆ. ಅದು ಕೂಡಲೇ ಕಾರ್ಯರೂಪಕ್ಕೆ ಬರುವಂತೆ ಜನತೆ ಒತ್ತಾಯಿಸಬೇಕು. ಜನರ ಸೇವಕರಾಗಿ ಶಾಸಕ ಹರೀಶ್ ಪೂಂಜರು ಮಾಡುವ ಜನಪರ ಕೆಲಸಗಳಿಗೆ, ಅಧಿಕಾರಿಗಳ ಕೆಲಸಗಳಿಗೆ ಅಭಿನಂದನೆ ಸಲ್ಲಬೇಕು, ಜನತೆ ಪ್ರೋತ್ಸಾಹ ನೀಡಬೇಕು.

3) ನೆಗೆಟಿವ್ ಮತ್ತು ಪೊಸಿಟಿವ್ ಜರ್ನಲಿಸಂ ಬಗ್ಗೆ ಪೂಂಜರು ಮಾಡಿದ ಭಾಷಣ ವೈರಲ್ ಆಗಿದೆ. ಸಂಚಲನ ಮೂಡಿಸಿದೆ. ನೆಗೆಟಿವ್ ಪತ್ರಕರ್ತರಿಗೆ ಭೀತಿ ಹುಟ್ಟಿಸಿದೆ. ಸ್ವತಃ ಪತ್ರಿಕೆ ನಡೆಸುವ ಅನುಭವವಿರುವ ಪತ್ರಕರ್ತರನ್ನು ದುಡಿಸುವ, ಪತ್ರಿಕೆ ಮತ್ತು ಪತ್ರಕರ್ತರನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವ ಹರೀಶ್ ಪೂಂಜರು ಹೇಳಿರುವ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಆ ಬಗ್ಗೆ ವಕೀಲರು, ಪತ್ರಿಕೆ ಹೊಂದಿರುವವರು, ಶಾಸಕರು ಆಗಿರುವ ಹರೀಶ್ ಪೂಂಜರ ನೇತೃತ್ವದಲ್ಲಿ ಪತ್ರಕರ್ತರ, ಮಾಧ್ಯಮ ಮತ್ತು ಸಾರ್ವಜನಿಕರ ನಡುವೆ ವಿಚಾರ ವಿಮರ್ಶೆ ನಡೆಯಬೇಕು. ಸಮಾಜಕ್ಕೆ ತೊಂದರೆ ಕೊಡುವ ನೆಗೆಟಿವ್ ಪತ್ರಿಕೋದ್ಯಮ ನಿಲ್ಲಲೇಬೇಕು. ಅದರ ಅನುಷ್ಠಾನಕ್ಕಾಗಿ ಪೂಂಜರು ಆ ಬಗ್ಗೆ ಮಾಡಿದ ಭಾಷಣದ ಸಂಪೂರ್ಣ ವಿವರವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದೇವೆ. ಅವರ ವೀಡಿಯೋವನ್ನು ಸುದ್ದಿ ಚಾನೆಲ್‌ನಲ್ಲಿ ನೀಡಲಿದ್ದೇವೆ. ಹೈಕೋರ್ಟ್‌ನ ತೀರ್ಪಿನ ವಿವರಗಳನ್ನು ನೀಡಲು ಪ್ರಯತ್ನಿಸಿದ್ದೇವೆ. ಹೈಕೋಟ್‌ನ ಆದೇಶವನ್ನು ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದ್ದೇವೆ.

4) ಹಾಗೆಯೇ ಶಾಸಕರ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷಗಳು ಮಾಡುವ ನೆಗೆಟಿವ್ ಪ್ರಚಾರ, ಕಾನೂನು ಬಾಹಿರ ಪ್ರತಿಭಟನೆ, ನೆಗೆಟಿವ್ (ಭ್ರಷ್ಟಾಚಾರದ) ಕೆಲಸಗಳು ನಿಲ್ಲಬೇಕು. ಪೊಸಿಟಿವ್ ಕೆಲಸಗಳು ನಡೆಯಬೇಕು. ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ ವಿಚಾರ ಅಳವಡಿಕೆಯಲ್ಲಿ ಬರಬೇಕು. ಆ ವಿಚಾರದಲ್ಲಿಯೂ ಶಾಸಕ ಪೂಂಜರ ನೇತೃತ್ವದಲ್ಲಿ ಎಲ್ಲಾ ಪಕ್ಷದ ಅಧ್ಯಕ್ಷರುಗಳು, ಶಾಸಕರು, ಸಂಸದರು, ಜನಪ್ರತಿನಿಧಿಗಳು ಸಾಮಾಜಿಕ ಚಿಂತಕರೊಡನೆ ಮತ್ತು ಸಾರ್ವಜನಿಕ ಪ್ರಮುಖರೊಡನೆ ಕುಳಿತು ಚರ್ಚಿಸಬೇಕು. ತಮ್ಮ ಜವಾಬ್ದಾರಿ ಮತ್ತು ಕೆಲಸಗಳನ್ನು ಮತದಾರ ರಾಜರಾದ ಜನರಿಗೆ ಮನದಟ್ಟು ಮಾಡಬೇಕು. ಈ ಎಲ್ಲಾ ಮತದಾರರ ಜಾಗೃತಿಯ ಆಂದೋಲನಗಳಿಗೆ ಸುದ್ದಿ ಜನಾಂದೋಲನ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ.
ಡಾ. ಯು.ಪಿ. ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ

ಶಾಸಕರ ವಿರುದ್ಧದ ಆರೋಪಗಳೇನು?:
ಮೇ 18ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಶಾಸಕ ಹರೀಶ್ ಪೂಂಜ, ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿದ್ದ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಠಾಣಾಽಕಾರಿಗಳಿಗೆ ಒತ್ತಡ ಹಾಕಿ, ಅವಾಚ್ಯವಾಗಿ ಪೊಲೀಸ್ ಸ್ಟೇಷನ್ ನಿಮ್ಮ ಅಪ್ಪಂದ ಜಾಗ್ರತೆ ಎಂದು ಬೈದು ಬೆದರಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆ, ಪೊಲೀಸ್ ಅಽಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ್ದಾರೆ ಎಂದು ಐಪಿಸಿ 353, 504ರಂತೆ ಶಾಸಕ ಹರೀಶ್ ಪೂಂಜ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿತ್ತು. ಮೇ 20ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಶಾಸಕ ಹರೀಶ್ ಪೂಂಜ ಕಾನೂನು ಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿ, ಬಿಜೆಪಿ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ ಎಂದೂ, ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದೂ ಬೆದರಿಸಿ, ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ, ಇತರ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿ, ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ್ದಾರೆ. ಈ ಬಗ್ಗೆ ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ 143, 147, 341, 504, 506, 149ರಡಿ ಎರಡನೇ ಎಫ್ಐಆರ್ ದಾಖಲಿಸಲಾಗಿತ್ತು.

LEAVE A REPLY

Please enter your comment!
Please enter your name here