ಪುತ್ತೂರು: ಕೃಷಿ ವಿಜ್ಞಾನ ಕೇಂದ್ರ (ದ.ಕ.) ಮಂಗಳೂರು, ಸಿ.ಪಿ.ಸಿ.ಆರ್.ಐ., ಕಾಸರಗೋಡು ಡೇ – ಎನ್.ಆರ್.ಎಲ್.ಎಂ ಸಂಜೀವಿನಿ – ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಕಡಬ, ಕೃಷಿ ಇಲಾಖೆ ಪುತ್ತೂರು, ತೋಟಗಾರಿಕೆ ಇಲಾಖೆ ಪುತ್ತೂರು, ರೈತ ಉತ್ಪಾದಕ ಕಂಪೆನಿ (ರಿ.) ಪುತ್ತೂರು, ಇವರ ಸಹಭಾಗಿತ್ವದಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಠ ಜಾತಿಯ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಟಿ. ಜೆ. ರಮೇಶ್, ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಹರೀಶ್ ಶೆಣೈ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಮುಖ್ಯ ಅತಿಥಿಗಳಾಗಿ ಜಗತ್ ತಾಲೂಕು ಕಾರ‍್ಯಕ್ರಮ ವ್ಯವಸ್ಥಾಪಕರು ಡೇ-ಎನ್.ಆರ್.ಎಲ್.ಎಮ್. ತಾಲೂಕು ಪಂಚಾಯತ್ ಕಡಬ, ಬಿ. ಸುಚೇತಾ ಅಧ್ಯಕ್ಷರು ಗ್ರಾಮ ಪಂಚಾಯತ್ ರಾಮಕುಂಜ, ಲಲಿತಾ ಕಾರ್ಯದರ್ಶಿಗಳು ಗ್ರಾಮ ಪಂಚಾಯತ್ ರಾಮಕುಂಜ, ಕವಿತಾ ಅಧ್ಯಕ್ಷರು ರಾಮಕುಂಜೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಾಮಕೊಮಜ ಉಪಸ್ಥಿತರಿದ್ದರು.
ಕೇಶವ ಗಾಂಧಿಪೇಟೆ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ರಾಮಕುಂಜ, ಪಂಚಾಯತ್ ಸದಸ್ಯರು, ಎಂಬಿಕೆ, ಕೃಷಿ ಸಖಿ, ಪಶು ಸಖಿ ಈ ಸಂದರ್ಭದಲ್ಲಿ ಹಾಜರಿದ್ದರು. ರಾಮಕುಂಜ ಗ್ರಾಮದ 29 ಕೊಲ ಗ್ರಾಮದ 6 ಮಂದಿಗೆ ತೆಂಗಿನ ಗಿಡಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.