ಗೇರುಕಟ್ಟೆ 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ

0

ಗೇರುಕಟ್ಟೆ : ಇಲ್ಲಿಯ 50 ನೇ ವರ್ಷದ ಸುವರ್ಣ ಮಹೋತ್ಸವವು ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಆ.31 ರಂದು ವಿಜೃಂಭಣೆಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಕುಂಠಿನಿ ವೇ‌.ಮೂ.ರಾಘವೇಂದ್ರ ಬಾಂಗೀಣ್ಣಾಯ ಇವರ ಪೌರೋಹಿತ್ಯ ದಲ್ಲಿ ವೈದಿಕ ಕಾರ್ಯಕ್ರಮ,ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ, ಪುಣ್ಯಾಹ,ಪ್ರಾರ್ಥನೆ ಗಣಹೋಮ,ಸೇವೆ,ವಿಧಿವತ್ತಾಗಿ,ಮಹಾ ಅನ್ನ ಸಂತರ್ಪಣೆ, ವಿಜೃಂಭಣೆಯಿಂದ ಪ್ರಾರಂಭವಾಯಿತು.

ಮಧ್ಯಾಹ್ನ ಸ್ಥಳೀಯ ಹವ್ಯಾಸಿ ಕಲಾವಿದರಿಂದ ತಾಳಮದ್ದಳೆ, ಸಂಜೆ ನಾಳ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನೆ, ರಾತ್ರಿ ಬೆಳ್ತಂಗಡಿ ಗುರು ಮಿತ್ರ ಸಮೂಹ ಇವರಿಂದ ತುಳು ನಾಡವೈಭವ ಕಾರ್ಯಕ್ರಮ ಮುಂದಿನ 2 ದಿನಗಳಲ್ಲಿ ,ಮಹಾ ಪೂಜೆ, ನಿತ್ಯ ಸಾರ್ವಜನಿಕ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.ಗಣೇಸಸಂಘದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದರು.

LEAVE A REPLY

Please enter your comment!
Please enter your name here