ಬದನಾಜೆ: ಬೃಹತ್ ಉಚಿತ ನೇತ್ರಾ ತಪಾಸಣಾ ಮತ್ತು ನೇತ್ರದಾನ ನೋಂದಾವಣೆ ಶಿಬಿರ 

0

ಉಜಿರೆ: ಇಲ್ಲಿಯ ಸ.ಹಿ.ಪ್ರಾ ಶಾಲೆ ಬದನಾಜೆಯಲ್ಲಿ ಅಖಿಲ ಕರ್ನಾಟಕ   ರಾಜ ಕೇಸರಿ ಟ್ರಸ್ಟ್ ಮತ್ತು ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಆಶ್ರಯದಲ್ಲಿ   522 ನೇ   ಬೃಹತ್ ಉಚಿತ ನೇತ್ರ ತಪಾಸನ ಶಿಬಿರ ಮತ್ತು ನೋಂದಾವಣೆ  ಶಿಬಿರವು ಸೆ.4 ರಂದು ನಡೆಯಿತು.

ಈ ಕಾರ್ಯಕ್ರಮವನ್ನು   ಉದ್ಘಾಟಿಸಿದ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಉಜಿರೆ ಗ್ರಾಮ ಪಂಚಾಯತ್ ನ  ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಯ್ಯಗೌಡ ಗೌರಾಧ್ಯಕ್ಷರು ಪ್ರಗತಿ ಯುವಕ ಮಂಡಲ, ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಇಲಿಯಾಸ್, ಎಸ್ ಡಿ ಎಂ ಸಿ ಹಿರಿಯ ಪ್ರಾಥಮಿಕ ಬದನಾಜೆ ಅನಿಲ್ ಡಿಸೋಜ, ಉದ್ಯಮಿಗಳು ಶ್ರೀ ಮನೋಜ್ ಕುಂಜಪ್ಪ,  ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಲಲಿತಾ, ಸವಿತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಕೆ ಚಂದ್ರಕಲಾ, ಮತ್ತು  ಪ್ರಸಾದ್ ನೇತ್ರಾಲಯದ ಡಾಕ್ಟರ್ ಅಭಿಷೇಕ್ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಗಳಲ್ಲಿ 137 ಶಿಬಿರಾರ್ಥಿಗಳು ಪಾಲ್ಗೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿತು.

LEAVE A REPLY

Please enter your comment!
Please enter your name here