ಉಜಿರೆ: ಎಸ್ ಡಿಎಂ ಐಟಿಐ  ಕಾಲೇಜಿನಲ್ಲಿ ಕೌಶಲ್ಯಗಳು ಮತ್ತು ಪ್ರಾಮುಖ್ಯತೆ ಯ ಕಾರ್ಯಾಗಾರ ಕಾರ್ಯಕ್ರಮ 

0

ಉಜಿರೆ :ಎಸ್ ಡೊ ಎಂ ಐಟಿಐ ಕಾಲೇಜಿನಲ್ಲಿ ಕೌಶಲ್ಯ ಮತ್ತು ಪ್ರಾಮುಖ್ಯತೆ ಕಾರ್ಯಾಗಾರ ಕಾರ್ಯಕ್ರಮವು ಸೆ.01ರಂದು ನಡೆಯಿತು.  ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯು ಮಹಿಳಾ ಸಬಲೀಕರಣಕ್ಕಾಗಿ ಈ ರೀತಿಯ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಸ್ ಡಿ ಎಂನ ಈ ಶಿಕ್ಷಣ ಸಂಸ್ಥೆಯು ಉತ್ತಮವಾದ ಎಲ್ಲಾ ಆಧುನಿಕ ಉಪಕರಣಗಳನ್ನು ಒಳಗೊಂಡ ಶಿಕ್ಷಣ ಸಂಸ್ಥೆಯನ್ನು ಹೊಂದಿದ್ದು ಮಹಿಳೆಯರ ಬಾಳಿಗೆ ಬೆಳಕನ್ನು ನೀಡುವ ಪ್ರಯತ್ನ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಬರಮೇಲು ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಎಸ್‌ ಡಿ ಎಂ ಪಿ ಜಿ ಕಾಲೇಜಿನ ಹಿರಿಯ ಎಂ ಎಸ್ ಡಬ್ಲ್ಯೂ ಪ್ರಾಧ್ಯಾಪಕರಾದ ಶ್ರೀ ರವಿಶಂಕರ್ ಸರ್ ಇವರು ತಮ್ಮ ವಿದ್ಯಾರ್ಥಿಗಳ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜ್ಞಾನದ ಜೊತೆಗೆ ಕೌಶಲ್ಯ ವಿದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ ಕೌಶಲ್ಯವು ಶಿಕ್ಷಣದ ಜೊತೆಗೆ ಬೆರೆತಾಗ ಕೌಶಲ್ಯಾಧಾರಿತ ಶಿಕ್ಷಣ ವಾಗುತ್ತದೆ ಈ ಶಿಕ್ಷಣ ಕೈಗಾರಿಕೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ವಿ ಪ್ರಕಾಶ್ ಕಾಮತ್ ಇವರು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಎಸ್ ಡಿ ಎಂ ಪಿ ಜಿ ಕಾಲೇಜ್ ನ ಸಹಾಯಕ ಪ್ರಾಧ್ಯಾಪಕರಾದ ಡಾ. ಅಕ್ಷತಾ ಕಾರಂತ್, ಇವರು ವಿದ್ಯಾರ್ಥಿನಿಯರಿಗೆ ವಿವಿಧ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು.

ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ಕು.ಸಹನಾ ಶೆಟ್ಟಿ ಹಾಗೂ ಕು. ಆಶ್ರಿತಾ ಜೈನ್ ಇವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕು. ತೇಜಸ್ವಿನಿ ಸ್ವಾಗತಿಸಿದರೆ ಮಾ. ಸಂಪತ್ ಕುಮಾರ್ ಇವರು ಧನ್ಯವಾದವನ್ನು ನೀಡಿದರು.

LEAVE A REPLY

Please enter your comment!
Please enter your name here