ಮಿತ್ತಬಾಗಿಲಿನ ಹಲವು ಕಡೆ ಪ್ರವಾಹಕ್ಕೆ ಹಾನಿ: ಕೊಚ್ಚಿ ಹೋದ ತಡೆಗೋಡೆಗಳು

0

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾ.ಪಂ ವ್ಯಾಪ್ತಿಯ ಕುಕ್ಕಾವು, ನಾಗಗುಂಡಿ, ಕಲ್ಲೋಲೆ, ಪಿಲತ್ತಡಿ, ದೇರ್ನೊಟ್ಟು,  ಏಳುವರೆ ಹಳ್ಳ ಹಾಗೂ ಶಿವನದಿಗೆ  ನಿರ್ಮಿಸಿದ ತಡೆಗೋಡೆಗಳು ಸೆ.6 ರ ಭಾರೀ ಮಳೆಗೆ, ಪ್ರವಾಹದಿಂದಾಗಿ ಸಂಪೂರ್ಣ ಕೊಚ್ಚಿಹೋದ ಘಟನೆ ವರದಿಯಾಗಿದೆ.

 

ಈ ನದಿಗಳಲ್ಲಿ 2019ರಲ್ಲಿ ಮೇಘಸ್ಪೋಟ ಉಂಟಾಗಿತ್ತು. ಅದರಿಂದ   1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತಡೆಗೋಡೆಗಳು ಪ್ರವಾಹದಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ. ಇದು ಕಳಪೆ ಕಾಮಗಾರಿಯಿಂದಾಗಿ ಅಲ್ಲ, ಬದಲಿಗೆ ಪ್ರವಾಹದ ತೀರ್ವತೆಯಿಂದಾಗಿ ಕೊಚ್ಚಿಹೋಗಿದೆ. ಎಂದು ಮಿತ್ತಬಾಗಿಲು ಗ್ರಾ.ಪಂ ಉಪಾಧ್ಯಕ್ಷ ವಿನಯ ಚಂದ್ರ ಎಸ್ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷೆ  ಲತಾ, ಅಭಿವೃದ್ಧಿ ಅಧಿಕಾರಿ ಜಯ ಕೀರ್ತಿ ಹೆಚ್.ಬಿ, ಮಾಜಿ ಅಧ್ಯಕ್ಷ ಕಕ್ಕೆನೇಜಿ ವಾಸುದೇವ ರಾವ್, ಗ್ರಾ.ಪಂ ಸದಸ್ಯರು, ಸ್ಥಳೀಯ ರಾಜೇಶ್ ಊರವರು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here