ಜೀವಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ನೇತೃತ್ವದಲ್ಲಿ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮ

0

ಕುಟ್ರುಪ್ಪಾಡಿ:    ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಜೀವಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ನೇತೃತ್ವದಲ್ಲಿ ಸೆ.6 ರಂದು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಕುಟ್ರುಪ್ಪಾಡಿ ಚರ್ಚ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.

ಮಹಾಸಂಘ ಅಧ್ಯಕ್ಷೆ  ಲಿಸ್ಸಿ ಮ್ಯಾಥ್ಯೂ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಟ್ರುಪ್ಪಾಡಿ ಆರೋಗ್ಯ ಅಧಿಕಾರಿ  ಶಿಲ್ಪಾರವರು ಮಾಹಿತಿಯನ್ನು ನೀಡಿದರು. ಪ್ರತೀ ಸಂಘಗಳಿಂದ ಸೊಪ್ಪು ತರಕಾರಿ ಬಳಸಿದ ಆಹಾರ ಪದಾರ್ಥಗಳ ಪ್ರಾತ್ಯಕ್ಷಿತೆ ನಡೆಯಿತು.

ಕಾರ್ಯಕರ್ತೆ  ಸುಶೀಲಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹ ಸಂಘದ ಸದಸ್ಯೆ ಶ್ರೀಮತಿ ವಲ್ಸಮ್ಮ ಸ್ವಾಗತಿಸಿ ಐಶ್ವರ್ಯ ಸಂಘದ ಸದಸ್ಯೆ ಶ್ರೀಮತಿ ಮೇರಿ ಪಿ.ಜೆ ವಂದಿಸಿದರು. ಸೌಭಾಗ್ಯ ಸಂಘದ ಸದಸ್ಯೆ  ವಲ್ಸಮ್ಮ ಎ.ಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here