ಬೆಳಾಲು ಕೂಡಿಗೆ ನದಿಯಲ್ಲಿ ಅಪರಿಚಿತ ಮಹಿಳೆಯ ಶವಪತ್ತೆ ಪ್ರಕರಣ: ಬೆಳಾಲು ಗ್ರಾ.ಪಂ ಧಫನ ಭೂಮಿಯಲ್ಲಿ ಅಂತ್ಯಕ್ರಿಯೆ

0

ಬೆಳಾಲು: ಬೆಳಾಲು ಕೂಡಿಗೆ ನೇತ್ರಾವತಿ ನದಿಯಲ್ಲಿ ಮೊನ್ನೆ ಸಿಕ್ಕಿದ ಅಪರಿಚಿತ ಮಹಿಳೆಯ ಶವದ ಪೋಸ್ಟ್ ಮೊರ್ಟಮ್ ಸೆ.9  ರಂದು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆದ ಬಳಿಕ ಆ ಶವದ ದಫನ ಕಾರ್ಯವನ್ನು ಬೆಳಾಲು ಗ್ರಾಮ ಪಂಚಾಯತ್ ದಫನ ಭೂಮಿಯಲ್ಲಿ ನಡೆಸಿಕೊಡುವಂತೆ ಬೆಳಾಲು ಪಿಡಿಓ ರವರು ಮತ್ತು ಧರ್ಮಸ್ಥಳ ಠಾಣಾ ಪೊಲೀಸರು ಬೆಳಾಲು ಶೌರ್ಯ ವಿಪತ್ತು ಘಟಕದ ಸದಸ್ಯ ಸುಲೈಮಾನ್ ರವರಲ್ಲಿ ಕೇಳಿಕೊಂಡರು.

ಈ ವಿಚಾರವನ್ನು ಘಟಕದ ಸಂಯೋಜಕರಾಗಿರುವ ಆಶಾ ರವರ ಗಮನಕ್ಕೆ ತಂದರು.ಕೂಡಲೇ ಘಟಕದ ಸದಸ್ಯರಾದ ಹರೀಶ್ ಕೂಡಿಗೆ, ಸುಲೈಮಾನ್ ಭೀಮಂಡೆ, ಸಂಜೀವ ಕೋಲ್ಪಾಡಿ, ಯಶೋಧರ ಮಂಡಾಲು,ಜಗದೀಶ್ ಪಲ್ಲಿದಡ್ಕ ಇವರುಗಳು ಸೇರಿಕೊಂಡು ಶವದ ದಫನ ಕಾರ್ಯವನ್ನು ಮಾಡಿ ಮುಗಿಸಿದರು.

LEAVE A REPLY

Please enter your comment!
Please enter your name here