ವೇಣೂರು: ಇಲೆಕ್ಟ್ರಿಶಿಯನ್ ಸಮ್ಮಿಲನ ಕಾರ್ಯಕ್ರಮ

0


ವೇಣೂರು: ಗ್ರೇಟ್ ವೈಟ್ ಮತ್ತು ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿ ವೇಣೂರು ಇದರ ಸಹಭಾಗಿತ್ವದಲ್ಲಿ ವೇಣೂರು ವಲಯದ ಎಲೆಕ್ಟ್ರಿಶಿಯನ್‌ಗಳ ಸಮ್ಮಿಲನ ಕಾರ್ಯಕ್ರಮ ಇಲ್ಲಿಯ ಶ್ರೀರಾಮ ನಗರದಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಗ್ರೇಟ್ ವೈಟ್ ಕಂಪೆನಿಯ ಪ್ರತಿನಿಧಿ ರಾಜೇಶ್ ಶೆಟ್ಟಿ ಅವರು ಹೊಸ ಉತ್ಪನ್ನಗಳನ್ನು ಪರಿಚಯಿಸಿದರು. ಸುಮಾರು 60 ಮಂದಿ ಎಲೆಕ್ಟ್ರಿಶಿಯನ್‌ಗಳು ಸಮ್ಮಿಲನದಲ್ಲಿ ಪಾಲ್ಗೊಂಡಿದ್ದರು. ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿಯ ಮಾಲಕ ಬಿ. ಮಂಜುನಾಥ ನಾಯಕ್, ಮೂಡಬಿದಿರೆ ವಿಜಯಾನ೦ದ ಎಲೆಕ್ಟ್ರಿಕಲ್ಸ್ ನ ಮಹೇಂದ್ರ, ವಿಜಯಾಪಾಲ್ ಉಪಸ್ಥಿತರಿದ್ದರು. ಆದಿತ್ಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here