ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾ| ಮಟ್ಟದ ತ್ರೋಬಾಲ್ ಪಂದ್ಯಾಟ

0

ಲಾಯಿಲ : ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ನಡೆಯಿತು. ಇದರ ಅಂಗವಾಗಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಆಗಮಿಸಿದ್ದರು, ಹಾಗೆಯೇ ಮಖ್ಯ ಅತಿಥಿಗಳಾಗಿ ಲಾಯಿಲ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಆಶಾ ಬೆನಡಿಕ್ಟಾ ಸಲ್ದಾನ, ಜಿಲ್ಲಾ ಕ್ರೀಡಾಧಿಕಾರಿ ಭುವನೇಶ್ , ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರು ಅಜಿತ್ ಕುಮಾರ್, ಬೆಳ್ತಂಗಡಿ ವಲಯ ಪ್ರೌಢಶಾಲಾ ವಿಭಾಗದ ಕ್ರೀಡಾ ಸಂಯೋಜಕರು  ಗುಣಪಾಲ್ ಎಂ.ಎಸ್, ಬೆಳ್ತಂಗಡಿ ವಲಯ ಸಂಪನ್ಮೂಲಧಿಕಾರಿಗಳು ಶ್ರೀಮತಿ ವಾರಿಜ, ಲಾಯಿಲ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಗಣೇಶ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವಸ್ಯ ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ಸಿ.ಪ್ರೀತಿ ಜಾರ್ಜ್ ಅವರು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಸುನೀತಾ ಧನ್ಯವಾದಗೈದರು. ಈ ಪಂದ್ಯಾಟದಲ್ಲಿ ಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ತಂಡ ಭಾಗವಹಿಸಿತು. ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಹಂತಕ್ಕೆ ಆಯ್ಕೆಯಾದರು, ಹಾಗೆಯೇ ಸೆ.7 ರಂದು ನಾರಾವಿಯಲ್ಲಿ ನಡೆದ ಜಿಲ್ಲಾಹಂತದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಮೂವರು ವಿದ್ಯಾರ್ಥಿನಿಯರು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

 

 

 

 

 

LEAVE A REPLY

Please enter your comment!
Please enter your name here