ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ:  ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮ ಇದರ ನೇತೃತ್ವದಲ್ಲಿ ಸೆ.17 ರಂದು ಹೆಚ್.ಐ.ವಿ ಸೋಂಕಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.

ಅತಿಥಿಗಳಾಗಿ ಆಗಮಿಸಿದ ಸೈಂಟ್ ಲಾರೆನ್ಸ್ ಚರ್ಚ್ ಬೆಳ್ತಂಗಡಿ ಇಲ್ಲಿನ ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯರಾದ ಶ್ರೀ ಕ್ಲಿಪ್ಪಿರವರು ಪೌಷ್ಟಿಕ ಆಹಾರ ವಿತರಿಸಿ ಶುಭ ಹಾರೈಸಿದರು. ಸಿ.ಎಮ್.ಎಲ್ ಇದರ ಉಪ ನಿರ್ದೇಶಕರಾದ ವಂದನೀಯ. ಸಿಸ್ಟರ್ ಆಲ್ಫೋನ್ಸಾರವರು ಧನಾತ್ಮಕ ಚಿಂತನೆ ನಡೆಸಿ ಮಾನಸಿಕವಾಗಿ ಸಧ್ರಡರಾಗಿ ಸಂತೋಷದಿಂದ ಇರಬೇಕು ಎಂಬ ಮಾತುಗಳ ಮೂಲಕ ಶುಭ ಹಾರೈಸಿದರು.

ಸಿ. ಎಮ್. ಎಲ್ ಕಾರ್ಯಕರ್ತರಾದ  ಡೈಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವ ಚೈತನ್ಯ ಸಂಘದ ಅಧ್ಯಕ್ಷೆ  ಲಲಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕಾರ್ಯಕರ್ತೆ ಶ್ರೀಮತಿ ಶಾರದಾ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಸಂಡೆ ಸ್ಕೂಲ್ ಮತ್ತು ಸಿ.ಎಮ್.ಎಲ್ ವತಿಯಿಂದ ಸೋಪ್. ಪೇಸ್ಟ್. ಬ್ರಷ್ ವಿತರಿಸಲಾಯಿತು. ಸಂಯೋಜಕಿ  ಸಿಸಿಲ್ಯಾ ತಾವ್ರೊ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಾರ್ಕ್ ಡಿ ಸೋಜರವರು ಎಲ್ಲರನ್ನು ವಂದಿಸಿದರು.

LEAVE A REPLY

Please enter your comment!
Please enter your name here