ಪಟ್ರಮೆ: ಹಾ.ಉ.ಸ.ಸಂಘ ಅನಾರು ಇದರ ವಾರ್ಷಿಕ ಸಾಮಾನ್ಯ ಸಭೆ

0

ಪಟ್ರಮೆ:  ಹಾ.ಉ.ಸ.ಸಂಘ ಅನಾರು ಪಟ್ರಮೆ ಇದರ ವಾರ್ಷಿಕ ಸಾಮಾನ್ಯ ಸಭೆಯು ಸೆ.14ರಂದು ಅನಾರು ದೇವಸ್ಥಾನದ ಸಮರ್ಪಣಾ ಸಭಾಭವನದಲ್ಲಿ ದೇವಪಾಲ ಅಜ್ರಿ ಉಳಿಯಬೀಡು ಅಧ್ಯಕ್ಷತೆಯಲ್ಲಿ ಜರುಗಿತು.

ನಿರ್ದೇಶಕ ರುಕ್ಮಯ್ಯ ಗೌಡ ಪದಳ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಪುರಂದರ ಪುರಂದರ ಸೂರ್ಯತಾವು ವರದಿ ವಾಚಿಸಿದರು.

ಸಂಘದ 2021 22ನೇ ಸಾಲಿನಲ್ಲಿ 79 , 314.04 ನಿವ್ವಳ ಲಾಭ ಬಂದಿದ್ದು ಉತ್ಪಾದಕರ ಬೋನಸ್ಸನ್ನ ಕಟ್ಟಡ ನಿಧಿಗೆ ವರ್ಗಾಯಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ಬೆಳ್ತಂಗಡಿ ಉಪ ವ್ಯವಸ್ಥಾಪಕರಾದ ಡಾಕ್ಟರ್ ಚಂದ್ರಶೇಖರ ಭಟ್ ಪಶುಗಳ ಕಾಯಿಲೆ ಮತ್ತು ಹಾಲಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು.

ಡಾ ಜಿತೇಂದ್ರ ಪ್ರಕಾಶ್ ಮಾತನಾಡಿ ಪಶು ವಿಮೆ ಪಶು ಆಹಾರದ ಬಗ್ಗೆ ಮಾಹಿತಿ ಕೊಟ್ಟರು . ದಕ್ಷಿಣ ಕನ್ನಡ ಹಾಲು ಒಕ್ಕೂಟ ಬೆಳ್ತಂಗಡಿ ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಪ್ರಾಸ್ತಾವಿಕ ಮಾಹಿತಿ ನೀಡಿದರು.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿವೃತ್ತ  ಸೇನಾನಿ ಪ್ರಸ್ತುತ ಒಕ್ಕೂಟದ ವಿಸ್ತರಣಾಧಿಕಾರಿಯಾದ ರಾಜೇಶ್ ಕಾಮತ್ ರವರನ್ನು ಸಂಘದ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು. ನಂತರ ರಾಜೇಶ್ ರವರು ಗೌರವಾನ್ವಿತ ಭಾರತದ ಸೇನೆಯಲ್ಲಿನ ಸೇವೆಯನ್ನು ಸದಸ್ಯರೊಂದಿಗೆ ಹಂಚಿಕೊಂಡರು.

ಸಂಘದಲ್ಲಿ 2017 ರಿಂದ 2022ರ ವರೆಗೆ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ 13 ಮಂದಿ ನಿರ್ದೇಶಕರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷ ದೇವಪಾಲ ಅಜ್ರಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಪಾತ್ರ ಅತಿ ಮುಖ್ಯ ಎಲ್ಲರೂ ಗುಣಮಟ್ಟದ ಹಾಲು ಹಾಗೂ ಪಶು ಆಹಾರ ಖರೀದಿಯೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ನಿರ್ದೇಶಕ ಬಾಲಕೃಷ್ಣ ಕಲ್ಲಾಜೆ ಧನ್ಯವಾದ ಸಲ್ಲಿಸಿದರು.  ಸಂಘದ ಪರೀಕ್ಷಕಿ ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು. ಶರತ್ ಚಂದ್ರ ಹಿರ್ತಡ್ಕ, ಚಂದ್ರಶೇಖರ್ ಹೊಳೆಬದಿ ವೇದಾವತಿ ಅನಾರು ಸಹಕರಿಸಿದರು.

 

LEAVE A REPLY

Please enter your comment!
Please enter your name here