ತುಳುವನ್ನು ತುಳುನಾಡಿನಲ್ಲಿ ಶಿಕ್ಷಣ ಹಾಗೂ ಆಡಳಿತದಲ್ಲಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗೆ ತುಳುವೆರೆ ಪಕ್ಷದಿಂದ ಮನವಿ

0

ಬೆಳ್ತಂಗಡಿ : ತುಳುನಾಡಿನಲ್ಲಿ ತುಳು ಭಾಷೆಯನ್ನು ಮತ್ತು ಕೊಡವ ನಾಡಿನಲ್ಲಿ ಕೊಡವ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಕಡ್ಡಾಯಗೊಳಿಸಬೇಕು ಎಂದು ತುಳುವೆರೆ ಪಕ್ಷದಿಂದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಗೆ ಮನವಿ ಮಾಡಿದ್ದಾರೆ.

ತುಳುನಾಡಿನಲ್ಲಿ ತುಳು ಭಾಷೆಯು ಸರ್ವ ಜನಾಂಗದ ಭಾಷೆಯಾಗಿದ್ದು ಸರಕಾರಗಳ ನಿರಂತರ ಅಸಡ್ಡೆಯಿಂದ ಭಾಷೆಯ ಉಳಿವಿನ ಬಗ್ಗೆ ಆತಂಕ ಎದುರಾಗಿದೆ. ಕೇರಳಕ್ಕೆ ಹಂಚಿ ಹೋದ ದಕ್ಷಿಣ ತುಳುನಾಡನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಹಂಚಿಕೆಯಾಗಿರುವ ಉಳಿದ ತುಳುನಾಡಿನಲ್ಲಿ ತುಳು ಭಾಷೆಯನ್ನು ಆಡಳಿತ ಮತ್ತು ಶಿಕ್ಷಣದಲ್ಲಿ ಕಡ್ಡಾಯಗೊಳಿಸಬೇಕು, ಕನ್ನಡನಾಡಿನಲ್ಲಿ ಕನ್ನಡ ಕಡ್ಡಾಯಗೊಳಿಸುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ತುಳುನಾಡಿನಲ್ಲಿ ಕನ್ನಡ ಭಾಷೆಯ ಹೇರಿಕೆ ಸರಿಯಾದುದಲ್ಲ. ತುಳುನಾಡು ಮತ್ತು ಕೊಡವ ನಾಡಿನಲ್ಲಿ ಕನ್ನಡ ಹೇರಿಕೆಯನ್ನು ನಿಲ್ಲಿಸುವಂತೆ ಹಾಗೂ ಕೊಡವ ನಾಡಿನಲ್ಲಿ ಕೊಡವ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಜಾರಿಗೆ ತರಬೇಕು ಎಂದು ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ.ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here