ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ಸಂಘದ ಹಿರಿಯ 75 ಸದಸ್ಯರಿಗೆ ಸನ್ಮಾನ

0

ಕೊಯ್ಯೂರು: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ಮಹಾ ಸಭೆ ಸೆ. 19 ರಂದು ಕೊಯ್ಯೂರು ಪಂಚದುರ್ಗಾ ಸಹಕಾರಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಉಜ್ವಲ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಆರ್ಥಿಕ ವರ್ಷದಲ್ಲಿ ಸಂಘದಲ್ಲಿ 1565 ಸದಸ್ಯರಿದ್ದು ರೂ.2.29 ಲಕ್ಷ ಪಾಲುಬಂಡವಾಳ ಹೊಂದಿದ್ದು ರೂ.132 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ.41.5 ಲಕ್ಷ ಲಾಭ ಗಳಿಸಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸಂಘದ ಹಿರಿಯ 75 ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಹಾಗೂ ಈ ವರ್ಷ ಕೊಯ್ಯೂರು ಸರಕಾರಿ ಪ್ರೌಢ ಶಾಲೆಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ, ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಹ ಶಿಕ್ಷಕ ರಾಮಚಂದ್ರ ದೊಡಮನಿ ಇವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರುಗಳಾದ ನವೀನ್ ಕುಮಾರ್, ಪರಮೇಶ್ವರ ಗೌಡ, ಪುರುಷೋತ್ತಮ, ಸಂಜೀವ ಎಂ. ಕೆ., ಹೊನ್ನಪ್ಪ ಪೂಜಾರಿ, ಗುಲಾಬಿ, ರೇವತಿ, ಯತೀಶ್ ದಡ್ದು ಉಪಸ್ಥಿತರಿದ್ದರು.

ನಿರ್ದೇಶಕ ರವೀಂದ್ರನಾಥ್ ಸ್ವಾಗತಿಸಿ, ನಿರ್ದೇಶಕ ಅಶೋಕ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ನಿಬ್ಬಂದಿ ಮಮತಾ ರೈ ಮತ್ತು ಕೇಶವ ಗೌಡ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಡೀಕಯ್ಯ ಪೂಜಾರಿ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here