ಕೊಯ್ಯೂರು: ಜೇನು ಕೃಷಿ ತರಬೇತಿ, ಪ್ರಾತ್ಯಕ್ಷತೆ ಹಾಗೂ ಪೌಷ್ಠಿಕ ತೋಟದ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ:  ತೋಟಗಾರಿಕೆ ಇಲಾಖೆಯ ಮುಂದಾಳತ್ವದಲ್ಲಿ ಕೊಯ್ಯುರು ಸಭಾ ಭವನದಲ್ಲಿ ಜೇನು ಕೃಷಿ ತರಬೇತಿ ಸೆ.22 ರಂದು ಹಾಗೂ  ಜೇನು ಕೃಷಿ ಪ್ರತಿಕ್ಷತೆ ಕಾರ್ಯಕ್ರಮವು ತೋಟಗಾರಿಕಾ ಇಲಾಖೆ ಮುಂದಾಳತ್ವದಲ್ಲಿ ಸೆ.23 ರಂದು ಕೊಯ್ಯುರು ಬಜಿಲ ವಿಷ್ಣುಮೂರ್ತಿ ಭಟ್ ರವರ ತೋಟದಲ್ಲಿ  ನಡೆಯಿತು.

ರಾಧಾಕೃಷ್ಣ ಕೋಡಿ ಪ್ರಗತಿಪರ ಕೃಷಿಕರು, ಭವಿಷ್ ಸಿಪಿಸಿರ್ ಪ್ರಾಂತಿಯ ಕ್ಷೇತ್ರ ವಿಟ್ಲ ಇವರು ಅಡಿಕೆ ಬಗ್ಗೆ ಮಾಹಿತಿ ನೀಡಿದರು. ಅಶ್ವಿನ್ ಜೇನು ಕೃಷಿ ಸಹಾಯಕರು ಪ್ರತಿಕ್ಷಿಕವಾಗಿ ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ  ಕೆ. ಎಸ್ ಚಂದ್ರ ಶೇಖರ್, ಕೊಯ್ಯುರು ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಡಾ. ಪ್ರಕಾಶ್ ,   ಕೊಯ್ಯುರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಸುಮಿತಾ, ಬೆಳ್ತಂಗಡಿ ಸಹಾಯಕ ನಿರ್ದೇಶಕರು ಮಹಾವೀರ ಮೊದಲದವರು ಉಪಸ್ಥಿತರಿದ್ದರು.

ಹಾಗೂ ಬೆಳ್ತಂಗಡಿ ತಾಲೂಕಿನ ಕೃಷಿಕ ಬಾಂಧವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here