ಕೊಯಮತ್ತೂರಿನಿಂದ ಧರ್ಮಸ್ಥಳಕ್ಕೆ  ಕೆಎಸ್ ಆರ್ ಟಿಸಿ   ಬಸ್ ಸೇವೆ ಆರಂಭ: ಡಾ|| ಡಿ ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತ

0

ಧರ್ಮಸ್ಥಳ:  ಕೊಯಮತ್ತೂರಿನಿಂದ ಧರ್ಮಸ್ಥಳಕ್ಕೆ  ಕೆಎಸ್ ಆರ್ ಟಿಸಿ   ಬಸ್ ಸೇವೆ ಆರಂಭವಾಗಿದೆ. ಕೊಯಮತ್ತೂರಿನಿಂದ ಇಂದು ಆಗಮಿಸಿದ ಈ ಬಸ್ ಗೆ ಧರ್ಮಸ್ಥಳದಲ್ಲಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ಮಂಜುನಾಥ ಸ್ವಾಮಿಯ ಪ್ರಸಾದವನ್ನು ಹಾಕಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಡಿಸಿ ರಾಜೇಶ್ ಶೆಟ್ಟಿ, ಡಿ ಎಂ ಇ ನವೀನ್, ಡಿ ಟಿ ಒ ಮರಿಗೌಡ ಉಪಸ್ಥಿತರಿದ್ದರು.

ಇನ್ನೂ ಈ ಬಸ್  ಮಧ್ಯಾಹ್ನ 3.30ಕ್ಕೆ ಕೊಯಮತ್ತೂರಿನಿಂದ ಹೊರಡುವ ಬಸ್ ರಾತ್ರಿ 9 ಗಂಟೆಗೆ ಮೈಸೂರು ತಲುಪಲಿದ್ದು, ರಾತ್ರಿ 10.15ಕ್ಕೆ ಮೈಸೂರಿನಿಂದ ಹೊರಟು 3.45ಕ್ಕೆ ಸುಬ್ರಹ್ಮಣ್ಯ ಮತ್ತು ಬೆಳಗ್ಗೆ 5ಗಂಟೆಗೆ ಧರ್ಮಸ್ಥಳಕ್ಕೆ ತಲುಪಲಿದೆ.

 

 

LEAVE A REPLY

Please enter your comment!
Please enter your name here