ಲಾಯಿಲ ಗ್ರಾ .ಪಂ ಸಭಾಂಗಣದಲ್ಲಿ ಸಂಜೀವಿನಿ ತಂಡಗಳ ಎಂ.ಬಿ.ಕೆ ಪ್ರಗತಿ ಪರಿಶೀಲನಾ ಸಭೆ

0

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಂಜೀವಿನಿ ತಂಡಗಳ  ಎಂ.ಬಿ.ಕೆ ಪ್ರಗತಿ ಪರಿಶೀಲನಾ ಸಭೆ ಸೆ.29ರಂದು ನಡೆಯಿತು.

ಈ ಸಭೆಯ ವೇಳೆ ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರಿಗೆ ,ಸಿಬ್ಬಂದಿ ಮತ್ತು ಸದಸ್ಯರನ್ನು ಉದ್ದೇಶಿಸಿ ಸುದ್ದಿ ಸಮೂಹ  ಸಂಸ್ಥೆಗಳ ಅಧ್ಯಕ್ಷರು,ಸುದ್ದಿ ಸಂಪಾದಕರು ಡಾ. ಯು.ಶಿವಾನಂದ್ ಪತ್ರಿಕೆ ಮತ್ತು ಮಾಧ್ಯಮಗಳ ಸಹಕಾರದ ಬಗ್ಗೆ ಮಾತನಾಡಿ ಸಂಜೀವಿನಿ ಸದಸ್ಯರ ಸಾಧನೆಗಳು,ಅವರ ಕಾರ್ಯಗಳನ್ನು ಗುರುತಿಸುವುದಕ್ಕಾಗಿ ಪತ್ರಿಕೆ ಮತ್ತು ವಾಹಿನಿಯಲ್ಲಿ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

ಸಂಜೀವಿನಿ ಕಾರ್ಯಾನುಷ್ಠಾನದಲ್ಲಿ ಆದ ಯಶೋಗಾಥೆಯ ಬಗ್ಗೆಯೂ ವರದಿ ಪ್ರಕಟಿಸುವುದಾಗಿ ತಿಳಿಸಿದರು. ಮಾಧ್ಯಮದ ಪ್ರೋತ್ಸಾಹ ಸಂಜೀವಿನಿ ಸದಸ್ಯರಿಗೆ ನಿರಂತರವಾಗಿ ಇರುತ್ತೆ ಎಂದು ಹೇಳಿದರು.
ಈ ವೇಳೆ ಸಂಜೀವಿನಿ ವಲಯ ಮೇಲ್ವಿಚಾರಕರಾದ ಜಯಾನಂದ್,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಪ್ರತಿಮಾ, ಸ್ವಸ್ತಿಕ್ ಜೈನ್, ಸುದ್ದಿ ವಾಹಿನಿಯ ಸಿಇಓ ಸಿಂಚನಾ ಊರುಬೈಲು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here