ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕ ಕಾಂಚೋಡು ಗೋಪಾಲಕೃಷ್ಣ ಇವರಿಂದ ಕುಡ್ಲ — ಕಾಶ್ಮೀರ ಸೈಕ್ಲಿಂಗ್ ಗೆ ರಾಷ್ಟ್ರ ಧ್ವಜ ಎತ್ತಿಹಿಡಿದು ಚಾಲನೆ

0

ಬೆಳ್ತಂಗಡಿ:  ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕ ಕಾಂಚೋಡು ಗೋಪಾಲ ಕೃಷ್ಣ ನಿವೃತ್ತ ಯೋಧರು ಇವರಿಂದ ಕುಡ್ಲ — ಕಾಶ್ಮೀರ ಸೈಕ್ಲಿಂಗ್ ಗೆ ರಾಷ್ಟ್ರ ಧ್ವಜ ಎತ್ತಿಹಿಡಿದು ಚಾಲನೆ ನೀಡಲಾಯಿತು.

ಶ್ರೀನಿಧಿ ಶೆಟ್ಟಿ ಮತ್ತು ಜಗದೀಶ್ ಬೆಳ್ತಂಗಡಿ ಇವರಿಂದ ರಾಷ್ಟ್ರದ ಯುವಜನತೆಗೆ ಪರಿಸರ ಸಂರಕ್ಷಣಾ ಅವಶ್ಯಕತೆಗಳು ಹಾಗು ಆರೋಗ್ಯ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವಗಳ ಅರಿವು ಮೂಡಿಸುವ ಮಹತ್ವದ ಸಂದೇಶಗಳನ್ನು ನೀಡುವ ಸದುದ್ದೇಶದೊಂದಿಗೆ 3500 ಕೀ ಮಿ ದೂರವನ್ನು ಹತ್ತು ರಾಜ್ಯಗಳ ಮೂಲಕ ಸಂಚರಿಸುವ ಮೂಲಕ ಕಾಶ್ಮೀರದಲ್ಲಿ  ಬೆಳ್ತಂಗಡಿ ತಾಲೂಕಿನ ಕೀರ್ತಿ ಪತಾಕೆಯನ್ನು ಬಾನೆತ್ತರ ರಾಷ್ಟ್ರ ತ್ರಿವರ್ಣ ಧ್ವಜ ಹಾರಿಸುವ ಕನಸನ್ನು ಸಹಕಾರಗೊಳಿಸುವ ಮಹತ್ವದ ಸಾಧನೆಗೆ ಹೊರಟಿದ್ದಾರೆ.

ಎಂಎಲ್ ಎಪ್ರತಾಪ್ ಸಿಂಹ ನಾಯಕ್ ರಿಂದ ಶುಭನುಡಿಯೊಂದಿಗೆ ರೋಟರಿ ಅಧ್ಯಕ್ಷೆ ಮನೋರಮ ರವರಿಂದ ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯರ‌ ಸಹಾಯಧನದೊಂದಿಗೆ ದಾರಿಯಲ್ಲಿಯ ಸಮಸ್ಯೆ ಗಳಿಗೆ ಸ್ಪಂದಿಸುವ‌ ಭರವಸೆಯೊಂದಿಗೆ ಶುಭ ಹಾರೈಕೆ ನೀಡಿ ಬೀಳ್ಕೊಡಲಾಯಿತು

LEAVE A REPLY

Please enter your comment!
Please enter your name here