ಮೂಡುಕೋಡಿ: ಕೆಸರ್ ಡೊಂಜಿ ದಿನ ಕಾರ್ಯಕ್ರಮ: ಈಶ್ವರ ಮಾಸ್ಟರ್ ಅಭಿಮಾನಿ ಬಳಗಕ್ಕೆ ಅವಳಿ ಪ್ರಶಸ್ತಿ

0

ಮೂಡುಕೋಡಿ: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ವೇಣೂರು ಘಟಕದ ಆತಿಥ್ಯದಲ್ಲಿ ಮೂಡುಕೋಡಿಯಲ್ಲಿ ನಡೆದ ನಾರಾವಿ ಜಿಲ್ಲಾ ಪಂಚಾಯತ್ ಮತ್ತು ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗದಲ್ಲಿ ಈಶ್ವರ ಮಾಸ್ತರ್ ಅಭಿಮಾನಿ ಬಳಗ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ತಂಡವನ್ನು ವೇಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅನೂಪ್ ಜೆ ಪಾಯಸ್ ಪ್ರಾಯೋಜಿಸಿದ್ದರು.

ಈ ಸಂಧರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಬಿಲ್ಲವ ಮುಖಂಡ ಜಯಂತ ನಡುಬೈಲು,ಬೆಸ್ಟ್ ಪೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ , ಕೇಂದ್ರ ಸಮಿತಿ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ,ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ,ನ್ಯಾಯವಾದಿ ಮನೋಹರ ಕುಮಾರ್ ,ಬೆಳ್ತಂಗಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ,ವೇಣೂರು ಘಟಕದ ಸ್ಥಾಪಕಾಧ್ಯಕ್ಷ ನಿತೀಶ್ ಹೆಚ್ ,ಅಧ್ಯಕ್ಷ ಯೋಗಿಶ್ ಬಿಕ್ರೊಟ್ಟು ,ಕ್ರೀಡಾ ಸಂಚಾಲಕರುಗಳಾದ ಶಿವಪ್ರಕಾಶ್,ಅರುಣ್ ಕೋಟ್ಯಾನ್ ,ಸತೀಶ್ ಪಿ.ಎನ್. ತಂಡದ ಸಂಯೋಜಕ ರಾಕೇಶ್ ಕುಮಾರ್ ಮೂಡುಕೋಡಿ ,ನಾಗೇಶ್ ಹೊಸಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here