ಅಂತರ್ ಜಿಲ್ಲೆ ರೋಟರಿ ಸಾಂಸ್ಕೃತಿಕ ಸ್ಪರ್ಧೆ ರೋಟರಿ ಕ್ಲಬ್ ಬೆಳ್ತಂಗಡಿಗೆ ಸಮಗ್ರ ಚಾಂಪಿಯನ್ ಶಿಪ್

0

ಬೆಳ್ತಂಗಡಿ :ರೋಟರಿ ಕ್ಲಬ್ ಬೆಳ್ತಂಗಡಿಯ ಆತಿಥ್ಯದಲ್ಲಿ ರೋಟರಿ ಜಿಲ್ಲೆ 3181 ವಲಯ 4 ರ ಅಡಿಯಲ್ಲಿ ಬರುವ 14  ರೋಟರಿ ಕ್ಲಬ್ ಗಳ ಸಾಂಸ್ಕೃತಿಕ ಕಾರ್ಯಕ್ರಮ ” ಪ್ರತಿಭಾ ಕಲ್ಪನೆ”  ಅ.16 ರಂದು ಉಜಿರೆಯ ಎಸ್.ಡಿ.ಎಂ.ಸೆಕೆಂಡರಿ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ರೊ. ಶರತ್ ಕೃಷ್ಣ ಪಡುವೆಟ್ನಾಯ ಅವರು ಉದ್ಗಾಟಿಸಿ ಯಾವುದೇ ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ,
ಸ್ಪರ್ಧೆಯನ್ನು ಕ್ರೀಡಾ ಸ್ಪೂರ್ತಿ ಯಿಂದ ಸ್ವೀಕರಿಸಬೇಕು ಎಂದರು.

ರೊ.ಉಮಾ ರಂಜನ್ ರಾವ್ ಅವರ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಕ್ಲಬ್ ನ ಅಧ್ಯಕ್ಷೆ ರೊ.ಮನೋರಮ ಭಟ್ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ರೊ.ಎಂ.ವಿ. ಭಟ್, ಹಾಗೂ ಇನ್ನೋರ್ವ ಅಸಿಸ್ಟೆಂಟ್ ಗವರ್ನರ್ ರೊ.ಮಂಜುನಾಥ  ಆಚಾರ್ಯ ರೋಟರಿ ಕ್ಲಬ್ ಕಾರ್ಯದರ್ಶಿ ರೊ.ರಕ್ಷಾ ರಾಘ್ನೀಶ್,ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಅಬೂಬಕ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಡುಗಾರಿಕೆ ಹಾಗೂ ನೃತ್ಯ ಸ್ಪರ್ಧೆ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಹಾಡುಗಾರಿಕಾ ಸ್ಪರ್ಧೆ, ಯುಗಳ ಗೀತೆ, ಸಮೂಹ ಗೀತೆ, ಸಮೂಹ ನೃತ್ಯ, ಸ್ಕಿಟ್ ,ಸ್ಡಾಂಡ್ ಅಪ್ ಕಾಮಿಡಿ
ಮುಂತಾದವುಗಳಿಗಾಗಿ ಸ್ಪರ್ಧೆಗಳು ನಡೆದವು.

ರೋಟರಿ ಕ್ಲಬ್ ಬೆಳ್ತಂಗಡಿ ಸೇರಿದಂತೆ ಉಪ್ಪಿನಂಗಡಿ,ಪುತ್ತೂರು ಸಿಟಿ, ಬಂಟ್ವಾಳ, ಬಿ.ಸಿ ರೋಡ್ ಸಿಟಿ, ಲೊರೆಟ್ಟೊ ಹಿಲ್ಸ್, ಸಿದ್ದಕಟ್ಟೆ, ಮೊಡಂಕಾಪು,ಮೂಡಬಿದಿರೆ, ಮೂಡುಬಿದಿರೆ ಟೆಂಪಲ್ ಟೌನ್,ವಿಟ್ಲ, ಸೇರಿದಂತೆ ಹನ್ನೊಂದು  ಕ್ಲಬ್ ಗಳು ಭಾಗವಹಿಸಿದ್ದವು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ಎಸ್.ಡಿ.ಎಂ.ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಪದ್ಮರಾಜ್ , ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರೊ.ಎಂ.ವಿ.ಭಟ್ ಹಾಗೂ ರೊ.ಇಲ್ಯಾಸ್ ಸ್ಯಾಂಕ್ಟಸ್, ರೋಟರಿ ಜಿಲ್ಲಾ ಸಾಂಸ್ಕೃತಿಕ ಚಟುವಟಿಕೆಗಳ ಚೇರ್ಮನ್ ಆಗಿರುವ ರೊ.ರಾಜೇಶ್ ಬಂಗೇರ ಬೆಳ್ತಂಗಡಿ ಕ್ಲಬ್ ನ ಸಾಂಸ್ಕೃತಿಕ ಕಾರ್ಯಕ್ರಮಗಳ ಚೇರ್ ಮಾನ್ ರೊ.ರೊನಾಲ್ಡೊ ಲೋಬೋ ಹಾಗೂ ಕ್ಲಬ್ ಸೇವೆಯ ಚೇರ್ಮೆನ್ ರೊ ಯೋಗೀಶ್ ಭಿಡೆ, ಕ್ಲಬ್ ನ ಅಧ್ಯಕ್ಷೆ ರೊ.ಮನೋರಮಾ ಭಟ್, ಕಾರ್ಯದರ್ಶಿ ರೊ.ರಕ್ಷಾ ರಾಘ್ನೀಶ್  ಮುಂತಾದವರು
ಭಾಗವಹಿಸಿದ್ದರು.

ಅಂತಿಮವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ ಎರಡನೆಯ ಸ್ಥಾನ ರೋಟರಿ ಕ್ಲಬ್ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಜಂಟಿಯಾಗಿ ಪಡೆದರೆ ಮೂರನೆಯ ಸ್ಥಾನ ರೋಟರಿ ಕ್ಲಬ್ ಪುತ್ತೂರು ಸಿಟಿ ಯ ಪಾಲಾಯಿತು.

LEAVE A REPLY

Please enter your comment!
Please enter your name here