ಕರ್ನಾಟಕ ರಾಜ್ಯ ರೈತ ಸಂಘ ಅಶ್ರಯದಲ್ಲಿ ಕುಮ್ಕಿ ಜಮೀನನ್ನು ರೈತರರಿಗೆ ಕಾನೂನು ಬಾಹಿರ ಮಂಜೂರು ವಿರೋಧಿಸಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕುಮ್ಕಿ ಜಮೀನನ್ನು ಇತರರಿಗೆ ಮಂಜೂರು ಮಾಡಿದ ವಿರುದ್ಧ ಅ.18 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗ ಶಾಂತಿಯುತ ಇಡೀ ದಿನ ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ ಶೆಟ್ಟಿ ಬಾಳ್ತಿಲ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೆ, ಗೌರವಾಧ್ಯಕ್ಷ ಸುರೇಂದ್ರ ಕೋರ್ಯ, ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿ.ಸಿ. ರೋಡ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಕಲ್ಲಡ್ಕ, ದಲಿತ ಹಕ್ಕುಗಳ ಸಮಿತಿಯ ಮುಖಂಡ ಶೇಖರ್ ಲಾಯಿಲ, ಸುಳ್ಯ ತಾಲೂಕು ಯುವ ರೈತ ಮುಖಂಡ ಮಂಜುನಾಥ ಮಡ್ತಿಲ, ಕಣಿಯೂರು ಗ್ರಾಮ ಘಟಕದ ಅಧ್ಯಕ್ಷರ ಅವಿನಾಶ್ , ಕಾರ್ಯದರ್ಶಿ ದೇವಪ್ಪ ಹಾಗೂ ಹಲವಾರು ಕಾರ್ಯಕರ್ತರು ಮಹಿಳಾ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here