ಬಳಂಜ ಫ್ರೆಂಡ್ಸ್ ನಾಲ್ಕೂರು ಸಹಯೋಗದಲ್ಲಿ ನಾಲ್ಕೂರು ಕ್ರಿಕೆಟ್ ಲೀಗ್ ಪಂದ್ಯಾಟ-2022

0

ಬಳಂಜ: ಫ್ರೆಂಡ್ಸ್ ನಾಲ್ಕೂರು ಸಹಯೋಗದಲ್ಲಿ ನಾಲ್ಕೂರು ಕ್ರಿಕೆಟ್ ಲೀಗ್- 2022  ಅಕ್ಟೊಬರ್ 16 ರಂದು ಅಟ್ಲಾಜೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಸತೀಶ್ ರೈ ಬಾರ್ಧಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ರೀಡಾಂಗಣದ ಉದ್ಘಾಟನೆಯನ್ನು ಹಿರಿಯರಾದ ನೋಣಯ್ಯ ಶೆಟ್ಟಿ ಕುರೆಲ್ಯಗುತ್ತು ಮಾಡಿದರು.

ವೇದಿಕೆಯಲ್ಲಿ ಸಾಧಿಕ್ ಬಳಂಜ, ಸದಾಶಿವ ಶೆಟ್ಟಿ, ಹರೀಶ್ ವೈ ಚಂದ್ರಮ, ಸನತ್ ಬಳಂಜ, ಸಂತೋಷ್ ಜೈನ್, ಯಶೋಧರ ಶೆಟ್ಟಿ, ಸುಜಿತ್ ಹೆಗ್ಡೆ, ರತ್ನಾಕರ ಶೆಟ್ಟಿ, ಬೇಬಿ ಪರವ ಉಪಸ್ಥಿತರಿದ್ದರು. ಹರೀಶ್ ಮಜ್ಜೆನಿ ಸಹಕರಿಸಿದರು.
ವರದಿ.ಸದಾನಂದ ಸಾಲಿಯಾನ್ ಬಳಂಜ.

LEAVE A REPLY

Please enter your comment!
Please enter your name here