ಮಡಂತ್ಯಾರು: ರಚನಾ ಸಿಲ್ಕ್ಸ್ ಶುಭಾರಂಭ; ನಗು ಮೊಗದ ಸೇವೆಯಿಂದ ಉದ್ಯಮ ಯಶಸ್ವಿ: ಪ್ರತಾಪ್ ಸಿಂಹ ನಾಯಕ್; ನಮ್ಮ ಸಂಸ್ಥೆಗೆ ಎಲ್ಲಾ ಗ್ರಾಹಕ ಬಂಧುಗಳ ಆಶೀರ್ವಾದವಿರಲಿ: ಮೋಹನ್ ಚೌಧರಿ

0

ಮಡಂತ್ಯಾರು: ಮಡಂತ್ಯಾರಿನ ಪೊಂಪೈ ಆರ್ಕೇಡ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ರಚನಾ ಸಿಲ್ಸ್ಕ್ ನ ಉದ್ಘಾಟನಾ ಸಮಾರಂಭವು ಅ. 19 ರಂದು ನಡೆಯಿತು.

ನೂತನ ಸಂಸ್ಥೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿ ಶುಭಕೋರಿದರು.

ಶ್ರೀ ಕ್ಷೇತ್ರ ಪಾರೆಂಕಿ ಮಹೀಷಮರ್ದಿನಿ ದೇವಸ್ಥಾನದ ಆರ್ಚಕರಾದ ಟಿ.ವಿ ಶ್ರೀಧರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಮಡಂತ್ಯಾರು ಸೇಕ್ರೆಟ್ ಹಾರ್ಟ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ಬೆಸಿಲ್ ವಾಸ್ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಬೆಳ್ತಂಗಡಿ ಜಮೀಯತುಲ್ ಫಲಾಹ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಬೇಬಿ ಸುಸಾನ, ಮಡಂತ್ಯಾರು ಗ್ರಾ.ಪಂ‌ ಅಧ್ಯಕ್ಷೆ ಶಶಿಪ್ರಭಾ, ಪೊಂಪೈ ಆರ್ಕೇಡ್ ಮಾಲಕರಾದ ಜೇಸನ್ ರೊಡ್ರಿಗಸ್, ರಚನಾ ಸಿಲ್ಕ್ಸ್ ಸಂಸ್ಥೆಯ ಮಾಲಕ ಪ್ರಭು ರಾಮ್ , ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮೋಹನ್ ಚೌಧರಿ ಹಾಗೂ ಇತರರು ಉಪಸ್ಥಿತರಿದ್ದರು.

ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here