ಉಜಿರೆ: ಎಸ್ ಡಿಎಂ ಐಟಿಯಲ್ಲಿ ಬೂಟ್ ಕ್ಯಾಂಪ್ ಕಾರ್ಯಾಗಾರ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಉದ್ಯಮಶೀಲತೆಯ ಬಗ್ಗೆ ಬೂಟ್-ಕ್ಯಾಂಪ್ ಕಾರ್ಯಾಗಾರ ನಡೆಯಿತು.

ಈ ಕಾರ್ಯಾಗಾರವನ್ನು IAMAIನ ಮ್ಯಾನೇಜರ್ ಅನೂಪ್ ಉದ್ಘಾಟಿಸಿ ಬೂಟ್-ಕ್ಯಾಂಪ್ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬಗೆಗಿನ ಆಲೋಚನೆಗಳನ್ನು ಚಿಗುರಿಸಿ, ಬೆಳೆಸಿ ಮತ್ತು ಅದರಿಂದ START UP ಕಂಪೆನಿಯನ್ನು ನಡೆಸಿಕೊಂಡು ಹೋಗುವ ಬಗೆಗೆ ತಿಳಿಸಿ ಕೊಡುವ ಕಾರ್ಯಾಗಾರವಾಗಿದೆ. ಭಾರತ ಮತ್ತು ರಾಜ್ಯ ಸರಕಾರವು ವಿದ್ಯಾರ್ಥಿಗಳನ್ನು ಉದ್ಯಮಶೀಲರಾಗುವಂತೆ ಮಾಡುವ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ನೊರ್ವ ಸಂಪನ್ಮೂಲ ವ್ಯಕ್ತಿ ವಿಷ್ಣು ನಾಗರಾಜ್, ಫೌಂಡರ್ ಸಿಇಒ evangelist-curve ಬೆಂಗಳೂರು, ಪ್ರಾಂಶುಪಾಲರಾದ ಡಾ| ಅಶೋಕ್ ಕುಮಾರ್, ಕೆ-ಟೆಕ್ ನ, ಸಂಯೋಜಕ ಮನೋಜ್ ಗಡಿಯಾರ್ ಹಾಗೂ nain district innovation associate ಸುಕೇಶ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು, ಎಸ್.ಯಮ್.ವಿ.ಐ.ಟಿ, ಬಂಟಕಲ್ಲು ಮತ್ತು ಎಸ್ ಡಿಎಂ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳೂ ಸೇರಿ ಸುಮಾರು 150 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.

LEAVE A REPLY

Please enter your comment!
Please enter your name here