ಸುದ್ದಿ ಬಿಡುಗಡೆಯ ದೀಪಾವಳಿ ವಿಶೇಷಾಂಕ 2022 ಬಿಡುಗಡೆ: ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಬಿಡುಗಡೆಗೊಳಿಸಿ ಶುಭ ಹಾರೈಕೆ

0


ಬೆಳ್ತಂಗಡಿ: ಕಳೆದ 37 ವರುಷಗಳಿಂದ ಡಾ.ಯು ಪಿ ಶಿವಾನಂದರವರ ಸಂಪಾದಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಈ ವರ್ಷದ ದೀಪಾವಳಿ ವಿಶೇಷಾಂಕ 2022 ಸಂಚಿಕೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್  ಅ.19 ರಂದು  ಬಿಡುಗಡೆಗೊಳಿಸಿದರು.

ಸಂಚಿಕೆಯನ್ನು ಬಿಡುಗಡೆಗೊಳಿಸಿರುವ ಪ್ರತಾಪ್ ಸಿಂಹ ನಾಯಕ್, ಸುದ್ದಿ ತಂಡದ ವಿಶೇಷ ಸಂಚಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸುದ್ದಿ ಬಿಡುಗಡೆ ಜನರ ಪತ್ರಿಕೆಯಾಗಿ ಮನೆಮಾತಾಗಿದೆ.ಜನಸಾಮಾನ್ಯರ ಪತ್ರಿಕೆಯಾಗಿಯೂ ಮನ್ನಣೆ ಪಡೆದಿದೆ.ದೀಪಾವಳಿಯ ಈ ವಿಶೇಷಾಂಕ ಬಿಡುಗಡೆ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಜನತೆಗೂ ಕೂಡ ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸುತ್ತೇನೆ. ಸುದ್ದಿ ಬಿಡುಗಡೆ ಬಳಗ ಪ್ರತಿ ವರ್ಷ ವಿಶೇಷವಾಗಿ ದೀಪಾವಳಿ ವಿಶೇಷಾಂಕವನ್ನು ತರುತ್ತಾರೆ ಅವರ ಬಳಗಕ್ಕೆ ಶುಭವಾಗಲಿ ಎಂದು ಪ್ರತಾಪ ಸಿಂಹ ನಾಯಕ್ ತಿಳಿಸಿದರು.

ಈ ವೇಳೆ ಸುದ್ದಿ ಬಿಡುಗಡೆ ಬೆಳ್ತಂಗಡಿ ವ್ಯವಸ್ಥಾಪಕ ಮಂಜುನಾಥ್ ರೈ, ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಜಾರಪ್ಪ ಪೂಜಾರಿ ಬೆಳಾಲು, ವರದಿಗಾರರಾದ ಸಂತೋಷ್ ಪಿ ಕೋಟ್ಯಾನ್, ಹೆರಾಲ್ಡ್ ಪಿಂಟೋ, ತಿಮ್ಮಪ್ಪ ಗೌಡ, ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ,ಬಿ. ಜೆ. ಪಿ. ಹಿರಿಯ ಮುಖಂಡ ಪ್ರಸಾದ್ ಕುಮಾರ್, ಕಿರಣ್ ರಾಜ್ ಉಜಿರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here