ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಕಳೆ0ಜಕ್ಕೆ ಭೇಟಿ

0

ಕಳೆ0ಜ : ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅ.19 ರಂದು ಕಳೆ0ಜ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಡೆ ತೆರಳಿ ಸ್ಥಳ ಪರಿಶೀಲಿಸಿದರು.

ಕಳೆ0ಜ ಸರಕಾರಿ ಹಿ. ಪ್ರಾ. ಶಾಲೆಗೆ ಭೇಟಿ ನೀಡಿದ ಇವರು ಮಕ್ಕಳಿಗೆ ಒಂದು ಗಂಟೆ ಕಾಲ ಪಾಠ ಮಾಡಿದರು ನಂತರ ಬಿಸಿ ಊಟ ಸವಿದರು.

ಕಳೆ0ಜದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡಿದ್ದು ಅದನ್ನು ಕೂಡಲೇ ತೆರವು ಗೊಳಿಸುವಂತೆ ಅಕ್ರಮಿತದಾರರಲ್ಲಿ ತಿಳಿಸಿದರು.

ಕಾಯರ್ತಡ್ಕ ಪ್ರಾಥಮಿಕ ಉಪ ಆರೋಗ್ಯ ಕೇಂದ್ರಕ್ಕೆ ಮೀಸಲಿದ್ದ ಒಂದು ಎಕ್ರೆ ಜಾಗದಲ್ಲಿ 70ಸೆಂಟ್ಸ್ ಜಾಗವನ್ನು ಕೆಲವರು ಅತಿಕ್ರಮಿಸಿ ಕೊಂಡಿದ್ದು ಅಲ್ಲಿಗೆ ತೆರಳಿ ಸ್ಥಳ ಪರಿಶೀಲಿಸಿದರು. ಕೂಡಲೇ ಗ್ರಾಮಕರಣಿಕರು ಜಾಗದ ಗಡಿ ಗುರುತು ಮಾಡಿ ಅತಿಕ್ರಮಿಸಿದ ಜಾಗವನ್ನು ತೆರವು ಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಎ ಪಿ., ಸದಸ್ಯರು, ರುದ್ರಭೂಮಿ ಸಮಿತಿ ಅಧ್ಯಕ್ಷ ಸಂಜೀವ ಕುಂಬಾರ, ಮತ್ತು ಸದಸ್ಯರು, ಕಂದಾಯ ನಿರೀಕ್ಷಕ ಪಾ ವಡಪ್ಪ ದೊಡ್ಡಮನಿ, ಗ್ರಾಮಕರಣಿಕ ಪೃಥ್ವಿಶ್,  ಸರ್ವೇ ಅಧಿಕಾರಿಗಳು,  ಇತರ ಕಂದಾಯ ಅಧಿಕಾರಿಗಳು, ಅಧ್ಯಾಪಕರು,     ಗ್ರಾಮಸ್ಥರು ಉಪಸ್ಥಿತರಿದ್ದರು.

 

 

 

 

 

 

LEAVE A REPLY

Please enter your comment!
Please enter your name here