ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯಿಂದ ಸಮಾಲೋಚನಾ ಸಭೆ

0

ಧರ್ಮಸ್ಥಳ:  ಗ್ರಾಮ ಪಂಚಾಯತ್ ನೌಕರರಿಗೆ “ಸಿ” ಮತ್ತು “ಡಿ” ದರ್ಜೆಯ ಸ್ಥಾನಮಾನಕ್ಕಾಗಿ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕೆ ಬೆಂಬಲ. ಹಾಗೂ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯಿಂದ ಸಮಾಲೋಚನಾ ಸಭೆ ಅ. 23ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯಿಂದ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ತಾಲೂಕು ಮಟ್ಟದ ಸಮಾಲೋಚನ ಸಭೆ ನಡೆಯಿತು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿದ ಹೊಸ ಹೊಸ ಯೋಜನೆಗಳನ್ನು ಪ್ರಥಮವಾಗಿ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ತಲುಪಿಸುವುದು, ಗ್ರಾಮದ ಸಂಪನ್ಮೂಲ ಕ್ರೂಡೀಕರಣ, ಮೂಲಭೂತ ಸೌಕರ್ಯವಾದ ನಲ್ಲಿ ನೀರು ಒದಗಿಸುವುದು ಮತ್ತು ಗ್ರಾಮದ ಸ್ವಚ್ಛತೆ ಮಾಡುವುದು ಇನ್ನಿತರ ಅನೇಕ ಕೆಲಸ ಕಾರ್ಯಗಳನ್ನು ಕನಿಷ್ಠ ವೇತನದಿಂದ ಗರಿಷ್ಠ ಸೇವೆಯನ್ನು ಹತ್ತು ಹಲವಾರು ವರ್ಷಗಳಿಂದ ಯಾವುದೇ ರೀತಿಯಾದ ಸರಕಾರಿ ಸವಲತ್ತು ಆರೋಗ್ಯ ಭದ್ರತೆ ಭವಿಷ್ಯ ನಿಧಿ ಸೇವಾ ಭದ್ರತೆ ಯಾವುದನ್ನು ಹೊಂದದೆ ವಂಚಿತರಾಗಿ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ಈ ಬಗ್ಗೆ ಈಗಾಗಲೇ ಹಲವು ವರ್ಷಗಳಿಂದ ಶಾಂತಿಯುತವಾಗಿ ಪತ್ರ ಮುಖೇನ ಶಾಸಕರುಗಳಿಗೆ ಮಾನ್ಯ ಮಂತ್ರಿಗಳಿಗೆ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದು ಯಾವುದೇ ರೀತಿಯಾದ ಬೇಡಿಕೆಗಳು ಈಡೇರಿರುವುದಿಲ್ಲ. ಆದ್ದರಿಂದ ಈ ಕೆಳಕಂಡ ಬೇಡಿಕೆ ಈಡೇರಿಕೆಗಾಗಿ ಹಾಗೂ ಗ್ರಾಮ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆಯ ಸ್ಥಾನಮಾನಕ್ಕಾಗಿ ಬೃಹತ್ ಹೋರಾಟ ಮಾಡುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು
ಮುಖ್ಯವಾದ ಬೇಡಿಕೆಗಳು: 
1. ಗ್ರಾಮ ಪಂಚಾಯತ್ ಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಸಿ ಮತ್ತು ಡಿ ದರ್ಜೆ ಸ್ಥಾನಮಾನ ಒದಗಿಸುವುದರ ಜೊತೆಗೆ ಪಟ್ಟಣ ಪಂಚಾಯಿತಿ ಮಾದರಿಯಂತೆ ವೇತನ ಶ್ರೇಣಿ, ESI ಮತ್ತು ಭವಿಷ್ಯ ನಿಧಿ ಸವಲತ್ತನ್ನು ಒದಗಿಸುವುದು.
2. ಸರಕಾರದ ಆದೇಶ ದಿನಾಂಕ 29.09.2020 ರ ಪೂರ್ವದಲ್ಲಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆಯಾಗದೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ ಪರಿಗಣಿಸದೆ ಹಾಗೂ ಹುದ್ದೆಗಳ ಗರಿಷ್ಠ ಮಿತಿ ನಿಗದಿಪಡಿಸದೆ ಒಂದು ಬಾರಿ ಜಿಲ್ಲಾ ಪಂಚಾಯತಿ ನಿಂದ ಅನುಮೋದನೆ ನೀಡಬೇಕು
3. ವಿದ್ಯಾರ್ಹತೆ ಮತ್ತು ವಯೋಮಿತಿ ಸಮಸ್ಯೆಯಿಂದ ಜಿಲ್ಲಾ ಪಂಚಾಯತ್ ಅನುಮೋದನೆ ಆಗದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು.

ಸಭೆಯನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷರದ ಡಾ. ದೇವಿಪ್ರಸಾದ್ ಬೊಲ್ಮ ರವರು ಮಾತನಾಡಿ, ಪೆನ್ನು ಹಾಗೂ ಪೇಪರ್ ಮೂಲಕ ಹಲವಾರು ಬದಲಾವಣೆಗಳನ್ನು ತರಲಾಗಿದೆ, ಆದರೆ ಈ ಸಂದರ್ಭದಲ್ಲಿ ಪೆನ್ನು ಮತ್ತು ಪತ್ರಗಳ ಬದಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಸಂಘಟಿತರಾಗಿ ಒಂದೇ ವೇದಿಕೆಯಡಿ ಸಿ ಮತ್ತು ಡಿ ದರ್ಜೆ ಸ್ಥಾನನಮಾನಕ್ಕಾಗಿ ಹೋರಾಟ ಮಾಡಬೇಕಾಗಿದ್ದು, ಇದು ನೌಕರರು ಮತ್ತು ಅವರನ್ನೇ ನಂಬಿರುವ ಕುಟುಂಬದ ಮುಂದಿನ ಭವಿಷ್ಯದ ಕುರಿತು ಆಲೋಚಿಸಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನ ಪಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯರಾದ ಶ್ರೀ ಪದ್ಮನಾಭ ಆರ್ ಕುಲಾಲ್ ಅವರು ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನೌಕರರ ಸಮಸ್ಯೆಗಳು, ಪ್ರಸ್ತುತ ನೌಕರರ ಪರಿಸ್ಥಿತಿಗಳು, ನೌಕರರ ಜೀವನ ಮಟ್ಟ, ನೌಕರರಲ್ಲಿರುವ ಹೊಂದಾಣಿಕೆಯ ಕೊರತೆ, ಈ ಬೃಹತ್ ಹೋರಾಟದಲ್ಲಿ ನೌಕರರ ಪಾತ್ರದ ಕುರಿತು ವಿಸ್ತೃತವಾಗಿ ವಿವರಿಸಿ ತಿಳಿಸಿದರು.

ಸದರಿ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರು ಡಾ.ದೇವಿಪ್ರಸಾದ್ ಬೊಳ್ಮಾ . ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಬ್ ಆರ್ ಕುಲಾಲ್ , ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರು ಸತೀಶ್ ಎಂ ನಾರಾವಿ, ಪ್ರಧಾನ ಕಾರ್ಯದರ್ಶಿ ರುಕೇಶ್ ಕಲ್ಮಂಜ, ಬೆಳ್ತಂಗಡಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಮೋಹನ್ ಲೈಲ, ಉಡುಪಿ ಜಿಲ್ಲಾ ಮಟ್ಟದ ಉಪಾಧ್ಯಕ್ಷರಾದ ಶ್ರೀ ಹೇಮಚಂದ್ರ ,ವಲಯ ಮಟ್ಟದ ಅಧ್ಯಕ್ಷರುಗಳು ಹಾಗೂ ಗ್ರಾಮ ಪಂಚಾಯತ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here