ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಇದರ ವತಿಯಿಂದ, ದೀಪಾವಳಿ ಹಬ್ಬದ ಗೌಜಿ ಗಮ್ಮತ್ ದೋಸೆ ಹಬ್ಬ

0

ಬೆಳ್ತಂಗಡಿ:  ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಇದರ ವತಿಯಿಂದ ಅ. 22 ರಂದು  ಛಾಯಾಭವನ ಗುರುವಾಯನಕೆರೆ ಯಲ್ಲಿ ದೀಪಾವಳಿ ಹಬ್ಬದ ಗೌಜಿ ಗಮ್ಮತ್ ದೋಸೆ ಹಬ್ಬ ನಡೆಯಿತು.

ಇದರ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷರಾದ ಸುಂದರ ದಂಪತಿಗಳು ಉದ್ಘಾಟಿಸಿದರು.  ಅಧ್ಯಕ್ಷರಾದ ಅಶೋಕ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ಉಪಾಧ್ಯಕ್ಷರಾದ ಪ್ರವೀಣ್ ಕೆದ್ದು ,ಸಿಲ್ವಿಯ ಬೆಳ್ತಂಗಡಿ ,ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ ನಾರಾವಿ ದಂಪತಿಗಳು ಹಾಗೂ ಮಕ್ಕಳು ಹಬ್ಬದ ಸಾಂಕೇತಿಕವಾಗಿ ಹಣತೆ ಹಚ್ಚುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಸದಸ್ಯ ದಂಪತಿಗಳಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನೃತ್ಯ ಸ್ಪರ್ಧೆ ಗಳು ಹಾಗೂ ಹಿರಿಯ ಛಾಯಾಗ್ರಾಹಕರಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.  ಕಾರ್ಯಕ್ರಮವನ್ನು ಪ್ರಶಾಂತ್ ಪರಪ್ಪಾಡಿ ನಿರ್ವಹಿಸಿದರು. ವಿಜೇತರಿಗೆ ಅಧ್ಯಕ್ಷರಾದ ಅಶೋಕ್ ಆಚಾರ್ಯ ಬಹುಮಾನ ವಿತರಿಸಿದರು ಗೌರವ ಸಲಹೆಗಾರರಾದ ಉಮೇಶ್ ಹಲೇಪೇಟೆ ಗೋಪಾಲ್ ಆಳದಂಗಡಿ ಕೆ ವಿ ಶರ್ಮಾ ಉಜಿರೆ ಜಗದೀಶ್ ಜೈನ್ ಧರ್ಮಸ್ಥಳ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಉಮೇಶ್ ಮದ್ದಡ್ಕ ಸ್ವಾಗತಿಸಿ ಧನ್ಯವಾದ ಕೋರಿದರು.

LEAVE A REPLY

Please enter your comment!
Please enter your name here