ಯಂಗ್ ಚಾಲೆಂಜರ್ಸ್ ನಲ್ಲಿ ಆಯುಧ ಪೂಜೆ, ದೀಪಾವಳಿ ಸೌಹಾರ್ದ ಹಾಡು ಕಾರ್ಯಕ್ರಮ

0

 

ಬೆಳ್ತಂಗಡಿ:  ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇಲ್ಲಿ ಅ.26 ರಂದು ದೀಪಾವಳಿ ಪ್ರಯುಕ್ತ ಮಲ್ಟಿ ಜಿಮ್ ನ ಸಾಧನಗಳು ಹಾಗೂ ಕ್ರೀಡಾ ಉಪಕರಣಗಳಿಗೆ ಆಯುಧ ಪೂಜೆ ಹಾಗೂ ಸೌಹಾರ್ದ ಹಾಡು ಕಾರ್ಯಕ್ರಮ ಜರುಗಿತು.

ಆಯುಧ ಪೂಜಾ ವಿಧಿಗಳನ್ನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ ಕಾನರ್ಪ ನಡೆಸಿಕೊಟ್ಟರು.

ಕಾರ್ಯಕ್ರಮದ ನಿಮಿತ್ತ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿನ ಶಿಕ್ಷಕಿ ಆಶಾ ಸುಜಿತ್, ಉಪನ್ಯಾಸಕ ಸುಜಿತ್ ಅವರ ನೇತೃತ್ವದ ತಂಡ ದೀಪಾವಳಿ ಪ್ರಯುಕ್ತ ಮನೆ ಮನೆಗೆ ತೆರಳಿ‌ ಸೌಹಾರ್ದ ಹಾಡು ಕಾರ್ಯಕ್ರಮ‌ ನಡೆಸಿಕೊಡುವ ಎರಡನೇ ವರ್ಷದ ಕಾರ್ಯಕ್ರಮ ಸಂಯೋಜಿಸಲಾಗಿತ್ತು.

ತಂಡದ ಹಾಡುಗಾರರಾಗಿ ಆಶಾ ಸುಜಿತ್ , ಹೆಚ್ ಕೃಷ್ಣಯ್ಯ ಲಾಯಿಲ, ಪ್ರಶಾಂತ್ ಪಚ್ಚು ಬೆಳ್ತಂಗಡಿ, ಪುಟಾಣಿ ಅರುಷಿ ಸಾಥ್ ನೀಡಿದರು. ಅವರ ಜೊತೆ ಸುಧಾ ಮತ್ತು ಸುರೇಶ್ ಧರ್ಮಸ್ಥಳ ಸಹಕರಿಸಿದರು.

ಸಂಘದ ವತಿಯಿಂದ ಆಶಾ ಸುಜಿತ್ ಅವರಿಗೆ ಶಾಲು ಸಮರ್ಪಿಸಿ ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸಂಸ್ಥೆಯ ಸಂಚಾಲಕ ಲ‌. ನಾಮದೇವ ರಾವ್ ಅಭಿನಂದನಾ ಮಾತುಗಳನ್ನಾಡಿದರು‌. ನಿಕಟಪೂರ್ವ ಅಧ್ಯಕ್ಷ ಲ. ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು. ತಾಂತ್ರಿಕ ನಿರ್ದೇಶಕ ಕೃಷ್ಣಾನಂದ ರಾವ್, ಕೋಶಾಧಿಕಾರಿ ಸಾಂತಪ್ಪ ಕಲ್ಮಂಜ, ಕಾರ್ಯಕರ್ತರಾದ ಪರಮೇಶ್ವರ, ರಾಘವ ಶೆಟ್ಟಿ ನೆಯ್ಯಾಲು, ಅಶೋಕ ರೈ, ಪ್ರಸಾದ್ ಶೆಟ್ಟಿ, ಆನಂದ, ದಿನೇಶ್, ಇಸ್ಮಾಯಿಲ್ ಡ್ರೈವರ್, ಹರಿಪ್ರಸಾದ್ ಭಟ್ ಹಿತ್ತಿಲಕೋಡಿ ಮೊದಲಾದವರು ಸಹಕರಿಸಿದರು.

ಸೌಹಾರ್ದ ಹಾಡು ಕಾರ್ಯಕ್ರಮದ ಪ್ರಯುಕ್ತ ನಾಡಿಗೆ ಸಂದೇಶ ಮತ್ತು ಸೌಹಾರ್ದತೆ ಸಾರುವ ಗೀಗೀ ಪದ, ಸೊಳ್ಮೆ ಉಳ್ಲಾಯ, ತೂಲ ತೂಲ ಪೊಣ್ಣೆ, ಸಾಲು ಮರದ ನೆರಳಿಂದ, ಎಲ್ಲಿ‌ಹೋದವೋ ಕಣ್ಣಿಗೆ ಮಾಯವಾದವೋ, ಸೃಷ್ಟಿಯ ಚಲನ, ಭಿನ್ನ ಭೇದವಾ ಮಾಡಬ್ಯಾಡಿರಿ, ಕಟ್ಟುತ್ತೇವಾ ನಾವು ಮೊದಲಾದ ಗೀತೆಗಳು ಮೂಡಿಬಂದವು.

LEAVE A REPLY

Please enter your comment!
Please enter your name here