ಮಾಲಾಡಿ ಗ್ರಾಮದ ಊರ್ಲ ಅಂಗನವಾಡಿ ಕಾರ್ಯಕರ್ತೆ ಶಾಂತಿ ಎಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ

0

ಮಾಲಾಡಿ: ಮಾಲಾಡಿ ಗ್ರಾಮದ ಊರ್ಲ ಅಂಗನವಾಡಿಯಲ್ಲಿ 11 ವರ್ಷ ಸುಧೀರ್ಘ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ಶಾಂತಿ ಎಸ್ ಇವರ ಬೀಳ್ಕೊಡುಗೆ ಸಮಾರಂಭವು ಜರುಗಿತು.

ಊರ್ಲ ಅಂಗನವಾಡಿ ಕೇಂದ್ರಕ್ಕೆ ನೂತನವಾಗಿ ಆಗಮಿಸಿದ ಕಾರ್ಯಕರ್ತೆಯನ್ನು ಶಶಿಕಲಾ ಹರಿಪ್ರಸಾದ್ ದಾಸ್ ಅವರನ್ನು ಸ್ವಾಗತಿಸಿದರು.

ಸನ್ಮಾನ ಕಾರ್ಯಕ್ರಮ:

ಈ ಸಂದರ್ಭದಲ್ಲಿ ಅಂಗನವಾಡಿಯ ಸ್ಥಾಪಕರಿಗೆ ಸುಮತಿ ಅಪ್ಪು ದಾಸ್ ಹಾಗೂ ನೂತನ ಅಂಗನವಾಡಿ ಸ್ಥಳಾವಕಾಶವನ್ನು ನೀಡಿದ ಗಣಪತಿ ವಾಮನ್ ದಾಸ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ವೇಳೆ ಊರ ಗಣ್ಯರು, ಪೋಷಕರು, ಅಂಗನವಾಡಿ ಮಕ್ಕಳು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರಾದಬೆನೆಡಿಕ್ಟಾಮಿರಾಂದ, ಸೆಲೆಸ್ಟಿನ್ ಡಿಸೋಜ, ಮಾಜಿ ಪಂಚಾಯತ್ ಸದಸ್ಯರು ಹಾಜರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಧನ್ಯವಾದ ಗೈದರು.

 

LEAVE A REPLY

Please enter your comment!
Please enter your name here