ಕುದ್ರಡ್ಕ ದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ವಿಶೇಷ ಪ್ರಾರ್ಥನಾ ಮಜ್ಲಿಸ್

0

ಬೆಳ್ತಂಗಡಿ : ಅಲ್ ಹಸನತುಲ್ ಜಾರಿಯ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಕುದ್ರಡ್ಕ ಇಲ್ಲಿನ ವಿದ್ಯಾರ್ಥಿಗಳ ಸಂಘಟನೆಯಾದ ಸುನ್ನೀ ಬಾಲ ಸಂಘ ಇದರ ಆಶ್ರಯದಲ್ಲಿ, ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಆಫಿಯತ್, ದೀರ್ಘಾಯುಷ್ಯಕ್ಕಾಗಿ ನಾರಿಯತುಸ್ವಲಾತ್ ಹೇಳಿ ವಿಶೇಷ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮವು ನಡೆಯಿತು.

ಮದ್ಹುರ್ರಸೂಲ್ ಪ್ರಭಾಷಣವನ್ನು ಸ್ಥಳೀಯ ಖತೀಬ್ ಹಂಝ ಮದನಿ ಮಾಡಿದರು. ಮದ್ರಸ ಮುಖ್ಯೋಪಾಧ್ಯಾಯ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು. ಜಮಾಅತ್ ಅಧ್ಯಕ್ಷ ಯಾಕೂಬ್ ಮಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.

ಅಧ್ಯಾಪಕ ಇಸ್ಮಾಯಿಲ್ ಸಅದಿ ಕುದ್ರಡ್ಕ ಮೌಲಿದ್ ಗೆ ನೇತೃತ್ವ‌ ನೀಡಿದರು. ಶೈಖುನಾ ಉಸ್ತಾದರ ಆಫಿಯತ್ ದೀರ್ಘಾಯುಷ್ಯಕ್ಕಾಗಿ ನಾರಿಯತುಸ್ವಲಾತ್ ಹೇಳಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಎಸ್.ಬಿ‌.ಎಸ್ ವಿದ್ಯಾರ್ಥಿಗಳಿಂದ ಕವಾಲಿ ಆಲಾಪನೆ ನಡೆಯಿತು.

ವೇದಿಕೆಯಲ್ಲಿ ಕೆ.ವಿ ಉಸ್ತಾದ್, ಹಂಝ ಸಅದಿ, ಯೂಸುಫ್ ಮುಸ್ಲಿಯಾರ್, ಹೈದರ್ ಫೈಝಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಕೋಶಾಧಿಕಾರಿ ಶರಫುದ್ದೀನ್, ಎಸ್‌ವೈಎಸ್ ಅಧ್ಯಕ್ಷ ಆದಂ ಎಯಿಕುಡೆ, ಎಸ್ಸೆಸ್ಸೆಫ್ ಅಧ್ಯಕ್ಷ ಜಮಾಲುದ್ದೀನ್ ಸಹಿತ ಹಲವು ನಾಯಕರು, ಜಮಾಅತರು, ರಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here