ಕೊಕ್ಕಡ ವಲಯದ 10ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ

0

ಕೊಕ್ಕಡ: ಕೊಕ್ಕಡ ವಲಯದ 10ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆಯು ನ. 8 ರಂದು ಶ್ರೀರಾಮ ಸೇವಾ ಮಂದಿರ ಕೊಕ್ಕಡದಲ್ಲಿ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷರು ಸೇಸಪ್ಪ ಮೂಲ್ಯ ವಹಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜನಜಾಗೃತಿ ವೇದಿಕೆಯ ತಾಲೂಕು ಸಮಿತಿಯ ಸದಸ್ಯರಾದ ಚೆನ್ನಪ್ಪ ಗೌಡರವರು 19ರಂದು ನಡೆಯುವ ಪಾದಯಾತ್ರೆಯ ಕಾರ್ಯಕ್ರಮಕ್ಕೆ ವಲಯದಿಂದ 1500 ಜನ ಭಾಗವಹಿಸುವುದು. ಹಾಗೂ ಉಜಿರೆ ಜನಾರ್ಧನಾ ಸ್ವಾಮಿ ದೇವಸ್ಥಾದಿಂದ ಧರ್ಮಸ್ಥಳ ದವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪೂಜ್ಯರ ಆಶೀರ್ವಾದ- ಮಾರ್ಗದರ್ಶನ ಪಡೆಯುವ ಒಂದು ಅಪೂರ್ವ ಅವಕಾಶ ಎಂದು ಹೇಳಿದರು.

ವೇದಿಕೆಯಲ್ಲಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಪಾದಯಾತ್ರೆಗೆ ನಾವೆಲ್ಲರೂ ಭಕ್ತಿ ಬಾವ ತ್ಯಾಗ ಮನೋಭಾವಗಳಿಂದ ಈ ಪವಿತ್ರವಾದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಗವಂತನ ದಿವ್ಯ ಅನುಗ್ರಹಕ್ಕೆ ಭಾಜನರಾಗಬೇಕೆಂದು ಮತ್ತು ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

ವೇದಿಕೆಯಲ್ಲಿ ವಲಯದ 4 ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು,ಉಪಾಧ್ಯಕ್ಷರು ಮತ್ತು ಸದಸ್ಯರು, ಒಕ್ಕೂಟದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಜನಾಜಾಗ್ರತಿ ತಾಲ್ಲೂಕು ಸಮಿತಿಯ ಸದಸ್ಯರು,ಗ್ರಾಮ ಸಮಿತಿಯ ಅಧ್ಯಕ್ಷರುಗಳು,ನವ ಜೀವನ ಸಮಿತಿ ಸದಸ್ಯರು, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರುಗಳು, ದೈವಸ್ಥಾನದ ಸಮಿತಿ ಸದಸ್ಯರುಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮೇಲ್ವಿಚಾರಕರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here