ಬೆಳ್ತಂಗಡಿ: ಜೂನಿಯರ್ ಕಾಲೇಜು ಸುತ್ತ ಮುತ್ತ ಬೀದಿ ನಾಯಿಗಳ ಕಾಟ: ಬೇಸತ್ತ ನಾಗರಿಕರು

0

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜು ರಸ್ತೆ ಮತ್ತು ಪ್ರಪುಲ್ಲನಗರ ಬಿಸಿಎಂ ಹಾಸ್ಟೆಲ್ ಸುತ್ತಮುತ್ತ ಸುಮಾರು 20 ಕ್ಕಿಂತಲೂ ಅಧಿಕ ಬೀದಿ ನಾಯಿಗಳು ರಸ್ತೆಯಲ್ಲಿ ಸಾಗುವ ನಾಗರಿಕರಿಗೆ,  ದ್ವಿಚಕ್ರ ವಾಹನ ಸವಾರರಿಗೆ ವಿಪರೀತ ತೊಂದರೆಯನ್ನುಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ.

ಬೆಳಗಿನ ಜಾವ ಜೂನಿಯರ್ ಕಾಲೇಜು ಸುತ್ತ ಮುತ್ತ ವಾಕಿಂಗ್ ಬಂದವರನ್ನು  ಮತ್ತು ಶಾಲಾ ಮಕ್ಕಳನ್ನು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತಿದ್ದು, ಈ ಬಗ್ಗೆ ಸಂಬಂಧ ಪಟ್ಟವರು ಗಮನಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಯಿ ಮರಿಗಳನ್ನೂ ಇಲ್ಲಿ ಬಿಡುತ್ತಿದ್ದು. ನಾಯಿಗಳಿಗೆ ಆಹಾರವನ್ನು ಪೂರೈಸುವ ವ್ಯಕ್ತಿಗಳಿಗೆ ಮಾಹಿತಿ ಸಿಗುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here