ಪೆರಿಂಜೆ: ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನೆ: ಕ್ರೀಡಾಕೂಟದ ಅನುದಾನದ ಬಗ್ಗೆ ಸರಕಾರಕ್ಕೆ ಪ್ರಸ್ತಾಪ: ಪ್ರತಾಪ್‌ಸಿಂಹ ನಾಯಕ್

0


ವೇಣೂರು: ಕ್ರೀಡಾಕೂಟದ ಅನುದಾನದ ಬಗ್ಗೆ ಈಗಾಗಲೇ ವಿಧಾನ ಪರಿಷತ್‌ನಲ್ಲಿ ಚರ್ಚೆಯಾಗಿದೆ. ಕ್ರೀಡಾಕೂಟಕ್ಕೆ ಸರಕಾರದಿಂದ ಹೆಚ್ಚಿನ ಅನುದಾನವನ್ನು ಒದಗಿಸಬೇಕೆಂಬ ನಿಮ್ಮ ಭಾವನೆಯನ್ನು ಸರಕಾರದ ಗಮನಕ್ಕೆ ತಂದು ವಿಧಾನ ಪರಿಷತ್‌ನಲ್ಲಿ ಧ್ವನಿಯೆತ್ತುತ್ತೇನೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ, ನ್ಯಾಯವಾದಿ ಕೆ. ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗ್ರಾ.ಪಂ. ಹೊಸಂಗಡಿ, ತಾಲೂಕು ಕ್ರೀಡಾಕೂಟ ಸಂಘಟನ ಸಮಿತಿ ಪೆರಿಂಜೆ, ಪೆರಿಂಜೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪೆರಿಂಜೆ ಸ.ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಜರುಗಿದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಭಗೀರಥ ಪ್ರಯತ್ನದಿಂದ ಈ ಕ್ರೀಡೆಯ ಆಯೋಜನೆ ಮಾಡಲಾಗಿದೆ. ಮಕ್ಕಳನ್ನು ಆಡಿಸಿ ಸರಿಯಾದ ರೇಖೆಯಲ್ಲಿ ಓಡಲು ತಿಳಿಯಪಡಿಸುವ ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನ ಮೆಚ್ಚುವಂಥದ್ದು ಎಂದರು.

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತ ಮೊಕ್ತೇಸರ, ಸಮಿತಿಯ ಗೌರವಾಧ್ಯಕ್ಷ ಎ. ಜೀವಂಧರ ಕುಮಾರ್ ಧ್ವಜಾರೋಹಣಗೈದರು. ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ., ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಪ್ರಕಾಶ್ ದೇವಾಡಿಗ, ವಿಶಾಲಾಕ್ಷಿ, ಪೆರಿಂಜೆರಾಜ್ಯಗುತ್ತುವಿನ ಜಯರಾಜ್ ಕಂಬಳಿ, ಪಿಡಿಒ ಗಣೇಶ್ ಶೆಟ್ಟಿ, ಪೆರಿಂಜೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮುಖ್ಯಶಿಕ್ಷಕಿ ವಸಂತಿ ಕೆ., ಸಿಆರ್‌ಪಿ ಆರತಿ, ತಾಲೂಕು ಕ್ರೀಡಾಕೂಟ ಸಂಘಟನ ಸಮಿತಿಯ ಕೋಶಾಧಿಕಾರಿ ಹೇಮಾವಸಂತ್, ಪೆರಿಂಜೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾ ನಾಯ್ಕ್, ಎಸ್‌ಡಿಎಂ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ಬಳ್ಳಾಲ್, ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್, ರವಿರಾಜ್ ಗೌಡ, ಕಾರ್ಯದರ್ಶಿ ಗಂಗಾಧರ್, ಜಯರಾಜ್ ಜೈನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರವೀಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಾ.ಶಾ.ಶಿ. ಸಂಘದ ಜಿಲ್ಲಾ ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ, ಜತೆ ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕ್ರೀಡಾಕೂಟ ವಲಯ ನೋಡೆಲ್ ಅಧಕಾರಿ ಮೆಟಿಲ್ಡಾ ಡಿಸೋಜ, ಹೊಸಂಗಡಿ ಗ್ರಾ.ಪಂ. ಸದಸ್ಯರು, ಪೆರಿಂಜೆ ಶಾಲೆ ಎಸ್‌ಡಿಎಂಸಿ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಪ್ರಸ್ತಾವಿಸಿದರು. ತಾಲೂಕು ಕ್ರೀಡಾಕೂಟ ಸಂಘಟನ ಸಮಿತಿಯ ಅಧ್ಯಕ್ಷ ಎಚ್. ಆಲಿಯಬ್ಬ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here