ಪದ್ಮುಂಜ: ಮಿಲಿಟರಿ ಯವರಿಗೆ ಕಾದಿರಿಸಿದ ಜಾಗ ಮಿಲಿಟರಿ ಯವರಿಗೆ ಹಸ್ತಾಂತರ ಕಾರ್ಯ: ನ್ಯಾಯಾಲಯದ ತಡೆಯಾಜ್ಞೆಯಿಂದ ಸ್ಥಗಿತ

0


ಪದ್ಮುಂಜ:  ಇಲ್ಲಿಯ ಕಣಿಯೂರು ಗ್ರಾಮದ ಸರ್ವ್ ನಂಬ್ರ 113 ರಲ್ಲಿ ನ್ಯಾಲಯದ ಆದೇಶದ ಮೇರೆಗೆ ಮಿಲಿಟರಿಯವರಿಗೆ ಮಂಜೂರಾದ ಸ್ಥಳವನ್ನು ಮಿಲಿಟರಿ ಯವರಿಗೆ ಹಸ್ತಾಂತರ ಮಾಡುವ ಕಾರ್ಯ ನ 10ರಂದು ಬೆಳ್ತಂಗಡಿ ತಹಶಿಲ್ದಾರರಾದ ಪೃಥ್ವಿ ಸಾನಿಕಂ ರವರು ದಿನ ನಿಗದಿ ಪಡಿಸಿದ್ದರು. ಅದರಂತೆ ಉಪ್ಪಿನಂಗಡಿ ಪೋಲೀಸರು ಕಂದಾಯ ಅಧಿಕಾರಿಗಳಾದ ಕಂದಾಯ ನಿರೀಕ್ಷಿತ ಪವಾಡಪ್ಪ ಕಣಿಯೂರು ಗ್ರಾಮ ಕರಣಿಕ ಸತೀಶ್,  ತಾಲೂಕು ಸರ್ವೇಯರ್ ಮಲ್ಲು ಸೇರಿದಂತೆ ಎರಡು ಜೆ ಸಿ ಬಿ ಯಂತ್ರದೊಂದಿಗೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸ್ಥಳ ಮಂಜೂರುಗೊಂಡ ನಿವ್ರತ ಮಿಲಿಟರಿ ಯವರಾದ ಚಂದಪ್ಪ ಗೌಡ ರವರು ಉಪಸ್ಥಿತರಿದ್ದರು.

ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ಕೃಷಿ ಮಾಡಿ ಸ್ವಾದೀನ ಹೊಂದಿದ್ದ ಕೊಲ್ಲಾಜೆ ನಾರಾಯಣ ರಾವ್ ಎಂಬವರು ನ್ಯಾಯಾಲಯದ ತಡೆಯಾಜ್ಞೆ ಆದೇಶವನ್ನು ಬೆಳ್ತಂಗಡಿ ತಹಶಿಲ್ದಾರರಿಗೆ ಹಾಜರುಪಡಿಸಿದ ಕಾರಣ ಹಸ್ತಾಂತರ ಕಾರ್ಯಾಚರಣೆ ಯನ್ನು ಸ್ಥಗಿತ ಗೊಳಿಸಲಾಯ್ತು .

LEAVE A REPLY

Please enter your comment!
Please enter your name here