ಉಜಿರೆ: ಅನಾರ್ ಕಾರ್ ಎಕ್ಸ್ ಪರ್ಟ್ಸ್ ಟಯರ್ ಶೋರೂಂ ನವೀಕೃತಗೊಂಡು ಶುಭಾರಂಭ

0

ಉಜಿರೆ:  ಉಜಿರೆ ಅನುಗ್ರಹ ಶಾಲಾ ಬಳಿ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಅನಾರ್ ಕಾರ್ ಎಕ್ಸ್ ಪರ್ಟ್ಸ್ ಟಯರ್ ಶೋರೂಂ ನ.11ರಂದು ನವೀಕೃತಗೊಂಡು ಶೂಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಉಜಿರೆ ಮತ್ತು ಪುತ್ತೂರು ಉದ್ಯಮಿ ಪಿ.ವಾಮನ ಪೈ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ದ.ಕ, ಉಡುಪಿ ಗ್ರಾರೇಜ್ ಮಾಲಕರ ಸಂಗದ ಅಧ್ಯಕ್ಷ ಜನಾರ್ಧನ ಅತ್ತಾವರ   ಬೆಳ್ತಂಗಡಿ ತಾ.ಗ್ಯಾರೇಜ್ ಮಾಲಕರ ಸಂಘ ಅಧ್ಯಕ್ಷ ಪೂವಪ್ಪ ಗೌಡ, ಉಜಿರೆ ಗೌಡರ ಸಂಘ ಗೌರವಾಧ್ಯಕ್ಷ ಪ್ರಕಾಶ್ ಅಪ್ರಮೇಯ ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಭಾಗಿಯಾಗಿದ್ದರು.

ಶಶಿಧರ ಗೌಡ ಬೆಡಿಗುತ್ತು, ಶ್ರೀಮತಿ ಮತ್ತು ರಾಜೀವ ಹಾಗೂ ಚಂದ್ರಶೇಖರ ಗೌಡ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಅತಿಥಿಗಳನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here