ಚಾರ್ಮಾಡಿ ಘಾಟಿ ಭಾಗದಲ್ಲಿ ಕಂಡು ಬಂದ ಬೃಹದಾಕಾರದ ಹೆಬ್ಬಾವು : ಮುಂಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ

0

ಚಾರ್ಮಾಡಿ: ಚಾರ್ಮಾಡಿ ಘಾಟಿ ಭಾಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ಬದಿ ಆಗಾಗ ಕಂಡು ಬರುತ್ತಿದೆ. ಕಳೆದ ಒಂದು ವಾರದಿಂದ ಸುಮಾರು 3 ಬಾರಿ ಘಾಟಿಯಲ್ಲಿ ನಿತ್ಯ ಪ್ರಯಾಣಿಸುವ ಅನೇಕ ಪ್ರಯಾಣಿಕರು ಹಾವನ್ನು ಕಂಡಿದ್ದಾರೆ. ಇದು ವಿಷಕಾರಿ ಅಲ್ಲದಿದ್ದರೂ ಅಪಾಯಕಾರಿಯಾಗಿರುವ ಕಾರಣ ಘಾಟಿ ಪ್ರದೇಶದಲ್ಲಿ ನಾನಾ ಕಾರಣಗಳಿಗೆ ವಾಹನದಿಂದ ಇಳಿಯುವ ಮಂದಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು, ಹಾಗೂ  ವಾಹನ ಸವಾರರು ಕೂಡ ಹಾವಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪ್ರಯಾಣಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here