ನೈಜೀರಿಯಾದಲ್ಲಿ ನೆಲೆಸಿರುವ ತುಳುವ ಬಂಧುಗಳಿಂದ ವಾರ್ಷಿಕ ಸಮ್ಮೇಳನ,ಸಾಂಸ್ಕೃತಿಕ ಕಾರ್ಯಕ್ರಮ

0

ನೈಜೀರಿಯಾ: ನೈಜೀರಿಯಾ ದೇಶದಲ್ಲಿ ನೆಲೆಸಿರುವ ಬೆಳ್ತಂಗಡಿ ಹಾಗೂ ಕರಾವಳಿ ಪ್ರದೇಶದ ತುಳುವ ಬಂಧುಗಳ ವಾರ್ಷಿಕ ಸಮ್ಮೇಳನ ನ. 13 ರಂದು ನಡೆಯಿತು.

ನೈಜೀರಿಯಾದಲ್ಲಿರುವ ಬೆಳ್ತಂಗಡಿ ಮತ್ತು ಕರಾವಳಿಯ ಎಲ್ಲಾ ತುಳು ಬಂಧುಗಳು ಒಂದೆಡೇ ಸೇರಿ ತುಳು ಭಾಷೆ,ಸಂಸ್ಕೃತಿ ಸಾರುವ ವಿವಿಧ ನೃತ್ಯ, ಕಿರು ನಾಟಕ ಪ್ರದರ್ಶನ ನಡೆಸಿದರು.

ದೂರದ ಊರಿನಲ್ಲಿ ಕೆಲಸದ ನಿಮಿತ್ತ ನೆಲೆಸಿದರೂ ನಮ್ಮ ದೇಶ, ನಮ್ಮ ಊರು ಎಂಬ ಅಭಿಮಾನದಲ್ಲಿ ಕಳೆದ 22 ವರ್ಷಗಳಿಂದ ತುಳುಕೂಟ ಲಾಗೋಸ್ – ನೈಜೀರಿಯಾ ಎಂಬ ಸಂಘಟನೆ ಕಟ್ಟಿಕೊಂಡು ಸಮಾಜಮುಖಿ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಂಡು ಎಲ್ಲರೂ ಒಟ್ಟಾಗಿ ಬೆರೆಯುತ್ತಿದ್ದಾರೆ.

ವಿಶೇಷವಾಗಿ ಊರಿನ ಮೇಲಿನ ಪ್ರೀತಿ ಅಭಿಮಾನದಿಂದ ಊರಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ, ದೇವಸ್ಥಾನ, ದೈವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌.

LEAVE A REPLY

Please enter your comment!
Please enter your name here