ಗಡಾಯಿಕಲ್ಲಿನಲ್ಲಿ ಟಿಕೇಟ್ ನೀಡದೇ ಹಣ ವಸೂಲಿ ಆರೋಪ: ವನ್ಯಜೀವಿ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ

0


ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ತಾಲೂಕಿಗೆ ಮುಕುಟಪ್ರಾಯದಂತಿರುವ ನಡ ಗ್ರಾಮದ ನರಸಿಂಹ ಗಡ ಗಡಾಯಿಕಲ್ಲು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ದಿನದಿಂದ ದಿನೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಷ್ಟಿಷ್ಟಲ್ಲ.ಇದು ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವುದರಿಂದ ಬರುವ ಪ್ರವಾಸಿಗರಿಗೆ ಮಕ್ಕಳಿಗೆ 25 ದೊಡ್ಡವರಿಗೆ 50 ರೂ ದರವನ್ನು ಇಲಾಖೆ ನಿಗದಿ ಪಡಿಸಿದೆ. ಅದರೆ ಇಲ್ಲಿ ಪ್ರವಾಸಿಗರಿಮದ ರಶೀದಿ ನೀಡದೆ ಹಣ ಪಡೆದುಕೊಂಡು ಅವ್ಯವಹಾರ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನ.20ರಂದು ಗಡಾಯಿಕಲ್ಲಿನಲ್ಲಿ ನಡೆದಿದೆ.

ಗಡಾಯಿಕಲ್ಲಿನಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ ಇದರಿಂದ ಪ್ರವಾಸಿಗರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಸಮರ್ಪಕವಾದ ಶೌಚಲಯ ಕುಡಿಯುವ ನೀರು ಇಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದೆ. ಬರುವ ಪ್ರವಾಸಿಗರಿಂದ ರಶೀದಿ ನೀಡದೇ ಹಣ ಪಡೆದುಕೊಳ್ಳಲಾಗುತ್ತಿದೆ.ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಥಳೀಯರು ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಟಿಕೇಟ್ ನೀಡದೆ ಹಣ ಪಡೆದಿರುವುದು ಅವರ ಗಮನಕ್ಕೆ ಬಂದ್ದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡು ಬರುವಂತಹ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು ಸರ್ಕಾರಕ್ಕೆ ವಂಚಿಸುವ ತಪಿತಸ್ಥ ಅಧಿಕಾರಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಂಡು ಅಮಾನತು ಮಾಡುವಂತೆ ಆಗ್ರಹಿಸಿ, ಸ್ಥಳಕ್ಕೆ ತಕ್ಷಣ ಬಂದು ಪರಿಶೀಲಿಸುವಂತೆ ಸೂಚನೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಆರ್.ಎಫ್.ಓ ಸ್ವಾತಿ ಅವರಲ್ಲಿ ವಿಷಯವನ್ನು ತಿಳಿಸಿ, ಫಾರೆಸ್ಟ್ ಅವರು ಉಡಾಫೆ ರೀತಿಯಲ್ಲಿ ಮಾತನಾಡುತ್ತಾರೆ. ಬೆದರಿಕೆಗಳನ್ನು ಹಾಕುತ್ತಾರೆ ಎಂದು ದೂರು ನೀಡಿದರು. ಅದಲ್ಲದೇ ಬಂದ ಪ್ರವಾಸಿಗರ ಕೈಯಿಂದ ಹಣ ಪಡೆದು ರಶೀದಿ ನೀಡುವುದಿಲ್ಲ, ರಜಾ ದಿನಗಳಂದು ನೂರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಗಾಗಿ ಬರುತ್ತಾರೆ.ಅದರೆ ಟಿಕೇಟ್ ಮಾತ್ರ ಸಿಮೀತ ಜನರಿಗೆ ನೀಡಲಾಗುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಸ್ವಾತಿ ಅವರು ಪರಿಶೀಲನೆ ನಡೆಸಿ ತಪ್ಪು ಎಸಗಿದ್ದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ಮೂಲ ಭೂತ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಒಂದು ವೇಳೆ ಮುಂದಿನ ದಿನಗಳಲ್ಲಿ ವ್ಯವಸ್ಥೆಗಳು ಸರಿ ಪಡಿಸದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನೂ ಸಾರ್ವಜನಿಕರು ನೀಡಿದರು.

LEAVE A REPLY

Please enter your comment!
Please enter your name here