ಉಜಿರೆ ಎಸ್ ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಡಾ| ದೀಪಕ್ ಹೆಬ್ಬಾರ್ ಗೆ ಪಿಹೆಚ್ ಡಿ

0

ಉಜಿರೆ : ಕಡಬ ತಾಲೂಕಿನ ಎನ್ ದತ್ತಾತ್ರೇಯ ಹೆಬ್ಬಾರ್ ಜ್ಯೋತಿ ದಂಪತಿಗಳ ಮಗನಾದ ಡಾ| ದೀಪಕ್ ಹೆಬ್ಬಾರ್ ಎನ್ ಪದವಿಯನ್ನು ಎಸ್ ಡಿಎಂ ಉಜಿರೆ ಕಾಲೇಜಿನಲ್ಲಿ , ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪಡೆದಿರುತ್ತಾರೆ.

ಮಣಿಪಾಲ ಅಕೆಡಾಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ ಇಲ್ಲಿನ ಡಾ| ಸುರೆಶ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ “ಮೈಕ್ರೋವೇವ್ ಅಸಿಸ್ಟೆಂಟ್ ಸಿಂಥೆಸಿಕ್ ಆಫ್ ಸ್ಪನೆಲ್ ಆಕ್ಸೈಡ್ ಫಾಸ್ಪರ್ಸ ಫಾರ್ ದ ಜನರೇಷನ್ ಆಫ್ ವೈಟ್ ಲೈಟ್” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಪಿಹೆಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಸರಕಾರ ಪೊಲೀಸ್ ಇಲಾಖೆಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here