ಭಾರಿ ಗಾಳಿ ಮಳೆಗೆ ಪಂಬೆತ್ತಾಡಿ -ಕಲ್ಮಡ್ಕ ಪರಿಸರದಲ್ಲಿ ಅಪಾರ ಹಾನಿ

0

ಭಾರಿ ಗಾಳಿ ಮಳೆಗೆ ಪಂಬೆತ್ತಾಡಿ -ಕಲ್ಮಡ್ಕ ಪರಿಸರದಲ್ಲಿ ಅಪಾರ ಹಾನಿಯಾದ ಘಟನೆ ಆ.31 ರಂದು ವರದಿಯಾಗಿದೆ. ಮರ ಉರುಳಿ ಬಿದ್ದ ಪರಿಣಾಮ ಪಂಬೆತ್ತಾಡಿ ಗ್ರಾಮದ ಅರಮನೆಕಟ್ಟ ಗಿರೀಶ್ ಮತ್ತು ಜಾಕೆ ಬಾಲಣ್ಣ ,ಮಂಚಿಕಟ್ಟೆ ವಾರಿಜಾ, ಕಲ್ಮಡ್ಕ ಗ್ರಾಮದ ಪರಮೇಶ್ವರ ಕಾಚಿಲ, ಸರಸ್ವತಿ ಬ್ರಾಂತಿಗದ್ದೆ, ಕಾಂತಪ್ಪ ಅಜಿಲ ಬೊಮ್ಮೆಟ್ಟಿ, ಬೊಳ್ಳೆಚ್ಚಿ ಕಲ್ಮಡ್ಕರವ ಮನೆಗಳಿಗೆ ಹಾನಿಯಾಗಿದೆ.ನೂರಾರು ಅಡಿಕೆ ಮರ, ತೆಂಗಿನ ಮರಗಳು ಧರೆಗೆ ಉರುಳಿದ್ದು ಕೃಷಿಕರಿಗೆ ಅಪಾರ ನಷ್ಟ ಸಂಭವಿಸಿದೆ.ಭಾರಿ ಗಾತ್ರದ ಮರಗಳು ಉರುಳಿವೆ.ಅನೇಕ ಕಡೆ ರಸ್ತೆಯ ಮೇಲೆ ಮರಗಳು ಉರುಳಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.

ಆ.31 ರಾತ್ರಿ ಶೌರ್ಯ ವಿಪತ್ತು ನಿರ್ವಹಣಾ ಘಟಕದವರು, ಗ್ರಾಮ ಪಂಚಾಯತ್ ನವರು,ಊರವರು ತೆರವು ಕಾರ್ಯಾಚರಣೆ ನಡೆಸಿದರು.ಸೆ.1 ರಂದು ಅರಣ್ಯ ಇಲಾಖೆಯವರು, ಕಂದಾಯ ಇಲಾಖೆಯವರು,ಗ್ರಾಮ ಪಂಚಾಯತ್ ನವರು , ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here