ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ಎನ್ನೆoಪಿಯುಸಿಗೆ ಅವಳಿ ಪ್ರಶಸ್ತಿ

0

ಸೆ 3ರಂದು ಪ.ಪೂ ಶಿಕ್ಷಣ ಇಲಾಖೆ ಮತ್ತು ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಎನ್ನೆ oಸಿ ಕ್ರೀಡಾoಗಣದಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಹುಡುಗರ ಮತ್ತು ಹುಡುಗಿಯರ ತಂಡ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹುಡುಗರ ತಂಡದಲ್ಲಿ ಚಂದನ್ (ನಾಯಕ ), ಸುಜಿತ್, ತೇಜಸ್, ಸೃಜನ್, ಕಿಶನ್, ಧೀಮಂತ್ ಹಾಗೂ ಹುಡುಗಿಯರ ವಿಭಾಗದಲ್ಲಿ ಎಂ ಟಿ ತೃಪ್ತಿ (ನಾಯಕಿ ), ಪುಣ್ಯಶ್ರೀ, ನಿಶ್ಮಿತಾ, ರೋಜಾ, ಮೇನಕಾ, ಮಾನ್ಯ ಆಟವಾಡಿದ್ದರು. ಕ್ರೀಡಾ ತರಬೇತುದಾರ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು.ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here