ಅಸೌಖ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗೆ ನೆರವು ನೀಡಿ ಶಿಕ್ಷಕರ ದಿನಾಚರಣೆ ಆಚರಿಸಿದ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕಿಯರು

0

 

72 ಸಾವಿರ ರೂ. ನೆರವು ವಿದ್ಯಾರ್ಥಿಗೆ ಹಸ್ತಾಂತರ

ಸುಳ್ಯ ಸೈಂಟ್ ಬ್ರಿಜಿಡ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಆಚರಿಸುತ್ತಿರುವ ಶಿಕ್ಷಕರ ದಿನಾಚರಣೆ ಈ ವರ್ಷವು ಆಚರಿಸಲಾಯಿತು.

ಆದರೆ ಆಚರಣೆಯ ಶೈಲಿ ಮಾತ್ರ ವಿಭಿನ್ನವಾಗಿತ್ತು.
ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಅವರವರ ಅಧ್ಯಾಪಕರುಗಳಿಗೆ ತಮ್ಮ ಮನೆಯಿಂದ ಹೂಗಳನ್ನು ತಂದು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.
ಕೇಲವು ವಿದ್ಯಾರ್ಥಿಗಳ ಸಿಹಿತಿಂಡಿ, ಉಡುಗೊರೆ ಗಳನ್ನು ತಂದು ಕೊಡುತ್ತಿದ್ದರು.
ವಿದ್ಯಾರ್ಥಿಗಳ ಪೋಷಕ ಸಮಿತಿ ಮತ್ತು ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನ ನೀಡುವ ಕಾರ್ಯಕ್ರಮ ನಡೆಯುತ್ತಿದ್ದವು.
ಅಲ್ಲದೇ ವಿದ್ಯಾಸಂಸ್ಥೆ ವತಿಯಿಂದ ನೆನಪಿನ ಕಾಣಿಕೆ ನಿಡುವುದು ಇಂತಹ ಕಾರ್ಯಕ್ರಮಗಳು ಈ ಶಾಲೆಯಲ್ಲಿ ನಡೆಯುತ್ತಿತ್ತು.
ಈ ಬಾರಿ ಶಿಕ್ಷಕರು ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಶಿಕ್ಷಣ ಸಂಸ್ಥೆಯಲ್ಲಿ 4 ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ಹಾರ್ದಿಕ್ ಗೆ ಮೂತ್ರಪಿಂಡಹಾಗೂ ರಕ್ತಕಣಗಳ ರೋಗದ ಸಮಸ್ಯೆಯಿಂದ‌ ಬಳಲುತ್ತಿರು ವಿದ್ಯಾರ್ಥಿಗೆ ಚಿಕಿತ್ಸೆ ಗೆ ನೆರವು ನೀಡಿ ಆಚರಿಸಿದರೂ.
ಶಾಲೆಯ ಶಿಕ್ಷಕರು ಅವರವರ ಕೈಯಿಂದ ಸ್ವಲ್ಪ ಮೊತ್ತವನ್ನು ಕ್ರೋಡೀಕರಿಸಿದರು.
ಅದೇ ರೀತಿ ಮಕ್ಕಳು ಯಾರು ಹೂ ಕೊಡುವುದಾಗಲಿ,ಉಡುಗೊರೆಗಳನ್ನು ಶಿಕ್ಷಕರಿಗೆ ಕೊಡಬೇಡಿ ಬದಲು ಅದಕ್ಕೆ ವಿನಿಯೋಗ ಮಾಡುವ ಹಣವನ್ನು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನಾರೋಗ್ಯ ಪೀಡಿತ ವಿದ್ಯಾರ್ಥಿಗೇ ನೆರವಿಗಾಗಿ ನೀಡಲು ವಿನಂತಿಸಿ ಕೊಂಡಿದ್ದರು ಮಾಡಿಕೊಂಡಿದ್ದರು ಅದೇ ರೀತಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆಯ ವಿದ್ಯಾರ್ಥಿಗೆ ನೇರವು ನೀಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದರು.
ಸೈಂಟ್ ಬ್ರಿಜಿಡ್ಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಪಾ.ವಿಕ್ಟರ್ ಡಿಸೋಜ ನೆರವು ಕಾರ್ಯಕ್ರಮ ಚಾಲನೆ ನೀಡಿದರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪ್ರವೀಣ್
ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಅಂತೋನಿ ಮೇರಿ ಶಿಕ್ಷಕಿಯರಾದ ,ಶ್ರೀಮತಿ ವಲ್ಸ,ಶ್ರೀಮತಿ ಸ್ಮಿತಾ,ಶ್ರೀಮತಿ ಪ್ಲೋಸಿ ಡಿಸೋಜ, ಶ್ರೀಮತಿ ಪಾವನ,ಸಿಸ್ಟರ್ ಮೆಟಿಲ್ಡಾ ಡೆಸಾ,ಸಿಸ್ಟರ್ ಗ್ರೇಸಿ ಡಿಸೋಜ, ಶ್ರೀಮತಿ ಶಾಂತಿ ಡಿಸೋಜ, ಶ್ರೀಮತಿ ಮೇರಿ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಇದ್ದರು.
73 ಸಾವಿರ ನೆರವು ಹಸ್ತಾಂತರ
ಶಿಕ್ಷಕರು ಮತ್ತು ಶಾಲಾ ಸಂಚಾಲಕರು ,ಹಾಗೂ ಗಿಪ್ಟ್ ನೀಡುವ ಮೊತ್ತವನ್ನು ಸೇರಿಸಿ ವಿದ್ಯಾರ್ಥಿಗಳು ಧನಸಹಾಯದ ಮೂಲಕ ನೀಡಿದ ಎಲ್ಲಾ ಮೊತ್ತವನ್ನು ಕ್ರೊಡಿಕರಿಸಿ ಎಪ್ಪತ್ತೆರಡು ಸಾವಿರವನ್ನು ಹಾರ್ದಿಕ್ ಮನೆಯವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here