ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ಪೋಷಕರ ಸಭೆ

0

ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಮದರಸ ವಿಧ್ಯಾರ್ಥಿಗಳ ಪೋಷಕರ ಸಭೆಯು ಸೆಪ್ಟೆಂಬರ್ 3 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಸಭಾಂಗಣದಲ್ಲಿ ನಡೆಯಿತು.

ಇದರ ಉಧ್ಘಾಟನೆಯನ್ನು ಖತೀಬರಾದ ಅಲ್ ಹಾಜ್ ಇಸಾಖ್ ಬಾಖವಿರವರು ನೆರವೇರಿಸಿ ಮಾತನಾಡಿ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಅತಿ ಅಗತ್ಯವಾಗಿದೆ, ಮಕ್ಕಳು ಯಾವುದನ್ನು ಬರೆದರು ಪ್ರೋತ್ಸಾಹಿಸಬೇಕು, ನಿರುತ್ಸಾಹ ಪಡಿಸಬಾರದೆಂದರು.
ಸದರ್ ಸಹದ್ ಪೈಝಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು.

ವೇದಿಕೆಯಲ್ಲಿ ಜಮಾಅತ್ ಕಾರ್ಯಾದರ್ಶಿ ಕೆ.ಎಂ ಮೂಸಾನ್, ಅನ್ವಾರುಲ್ ಹುಧಾ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್ , ದಿಕ್ರ್ ಸ್ವಲಾತ್ ಸಮಿತಿ ಯ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಉಪಸ್ಥಿತರಿದ್ದರು.
ಸಹಾಯಕ ಅಧ್ಯಾಪಕ ಸಾಜಿದ್ ಅಝ್ಹರಿ ಸ್ವಾಗತಿಸಿ, ಮದರಸ ಸಂಚಾಲಕರಾದ ಅಮೀರ್ ಕುಕ್ಕುಂಬಳ ವಂದಿಸಿದರು.

LEAVE A REPLY

Please enter your comment!
Please enter your name here