ಐವರ್ನಾಡು ಸ.ಪ.ಪೂ.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ

0

ಸ.ಹಿ.ಪ್ರಾ.ಶಾಲಾ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಐವರ್ನಾಡು ಬಾಲಕಿಯರ ತಂಡ ಪ್ರಥಮ

ದ.ಕ.ಜಿಲ್ಲಾ ಪಂಚಾಯತ್ ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ,ಸ.ಪ.ಪೂ.ಕಾಲೇಜು ಐವರ್ನಾಡು ಮತ್ತು ಸ.ಹಿ.ಪ್ರಾ.ಶಾಲೆ ಐವರ್ನಾಡು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟವು ಸೆ.09 ರಂದು ಐವರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಒಟ್ಟು ಏಳು ತಾಲೂಕಿನ 28 ತಂಡಗಳು ಭಾಗವಹಿಸಿದ್ದವು.
450 ಜನ ಕ್ರೀಡಾಪಟುಗಳಿದ್ದರು.
50 ಜನ ತೀರ್ಪುಗಾರರಿದ್ದು ಕ್ರೀಡಾಕೂಟವನ್ನು ಉತ್ತಮವಾಗಿ ನಡೆಸಿಕೊಟ್ಟರು.
ಮಳೆಯ ನಡುವೆಯು ಪಂದ್ಯಾಟ ಯಶಸ್ವಿಯಾಗಿ ನಡೆಯಿತು.

ಕ್ರೀಡಾಕೂಟದ ಫಲಿತಾಂಶ

ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಥಮ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ ಬಂದಾರು ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿತು.
ಬಾಲಕರ ವಿಭಾಗದಲ್ಲಿ ಪ್ರಥಮ ಮಂಗಳೂರು ಉತ್ತರ ಪ್ರಥಮ, ದ್ವಿತೀಯ ಪುತ್ತೂರಿನ ಬಿಳಿನೆಲೆ ಹಿ.ಪ್ರಾ.ಶಾಲೆ ಪಡೆದುಕೊಂಡಿತು.
ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೊಂಬೆಟ್ಟು ಪ್ರೌಢ ಶಾಲೆ,ದ್ವಿತೀಯ ಸ್ಥಾನವನ್ನು ಮಂಗಳೂರು ಉತ್ತರ ಪಡೆದುಕೊಂಡಿತು.
ಬಾಕಿಯರ ವಿಭಾಗದಲ್ಲಿ ಪ್ರಥಮ ಐವರ್ನಾಡು ಪ್ರೌಢ ಶಾಲೆ ದ್ವಿತೀಯ ಸ್ಥಾನವನ್ನು ಪುತ್ತೂರು ಬಿಳಿನೆಲೆ ಪ್ರೌಢ ಶಾಲೆ‌ ಪಡೆದುಕೊಂಡಿತು.


 

LEAVE A REPLY

Please enter your comment!
Please enter your name here