ಅರಂತೋಡು: ಯುವಕ ನೇಣುಬಿಗಿದು ಆತ್ಮಹತ್ಯೆ

0

 

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡಿನಲ್ಲಿ ಸೆ.11ರಂದು ಸಂಭವಿಸಿದೆ.

ಅರಂತೋಡಿಮ ಹೊನ್ನಪ್ಪ ಮಡಿವಾಳ ಹಾಗೂ ಶ್ರೀಮತಿ ವಿಶಾಲಾಕ್ಷಿ ಅವರ ಪುತ್ರ ಕೇಶವ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಸೆ.10ರಂದು ಮನೆಯ ಸದಸ್ಯರು ಮಲ್ಲ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದು, ಕೇಶವ ಅವರು ಮಾತ್ರ ಮನೆಯಲ್ಲಿದ್ದರೆನ್ನಲಾಗಿದೆ.
ದೇವಸ್ಥಾನದಿಂದ ಕೇಶವ ಅವರ ತಾಯಿ ವಿಶಾಲಾಕ್ಷಿ ಅವರು ರಾತ್ರಿ ದೂರವಾಣಿ ಮೂಲಕ ಮಗನೊಂದಿಗೆ ಮಾತನಾಡಿದಾಗ ತಾನು ನೆಂಟರ ಮನೆಗೆ ಹೋಗುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಆದರೆ ಕೇಶವ ಅವರು ತಮ್ಮ
ಮನೆಯ ಮಹಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸೆ.11ರಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿದ್ದ ತಂದೆ ತಾಯಿ ಬಂದು ಬಾಗಿಲು ತೆರೆದು ನೋಡಿದಾಗ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಬಳಿಕ ಪೊಲೀಸರು ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತೆಂದು ತಿಳಿದುಬಂದಿದೆ.
ಕೇಶವ ಅವರು ಅವಿವಾಹಿತರಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ವರ್ಕ್ ಪ್ರಂ ಹೋಮ್ ಕೆಲಸ ನಡೆಸುತ್ತಿದ್ದರು. ಮೃತರು ಸಹೋದರ ಮನೋಜ್, ಸಹೋದರಿ ಪವಿತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಯುವಕನ ಡೆತ್ ನೋಟ್ ಪೊಲೀಸರಿಗೆ ಲಭಿಸಿದ್ದು, ಲ್ಯಾಪ್ ಟ್ಯಾಪನ್ನು ಠಾಣೆಗೆ ಕೊಂಡೊಯ್ದಿದ್ದಾರೆಂದು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here