ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲಿಗೆ ಕೇಂದ್ರ ಸರಕಾರದಿಂದ CBSE ಮಾನ್ಯತೆ

0

ಪುತ್ತೂರು: ಹೊಸನಗರ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ (ಶ್ರೀ ರಾಮಚಂದ್ರಾಪುರ ಮಠ, ಹೊಸನಗರ) ಇವರ ದಿವ್ಯಹಸ್ತದಿಂದ 2020ನೇ ಇಸವಿಯಲ್ಲಿ ಶಂಕುಸ್ಥಾಪನೆಗೊಂಡು, 3.11.2021ರಂದು ಲೋಕಾರ್ಪಣೆಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘದ 70ನೇ ಸಹಸಂಸ್ಥೆಯಾದ, ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿಗೆ ಈಗ ಕೇಂದ್ರ ಸರಕಾರದಿಂದ; ಮಕ್ಕಳಿಗೆ 1ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾಭ್ಯಾಸಕ್ಕಾಗಿ, CBSE ಮಾನ್ಯತೆಯು ದೊರೆತಿರುತ್ತದೆ. ಇದರಿಂದಾಗಿ, ನಗರದ ವಿದ್ಯಾಪ್ರೇಮಿಗಳ ಹಲವು ವರ್ಷಗಳ ಕನಸು ಸಾಕಾರಗೊಂಡಂತಾಗಿದೆ.

ಈ ವಿದ್ಯಾಸಂಸ್ಥೆಯಲ್ಲಿ, ಮಕ್ಕಳಿಗೆ ಕೇಂದ್ರೀಯ ಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನ, ಭಾರತೀಯ ಸಂಸ್ಕೃತಿ, ಸದ್ಗುಣ, ಸನ್ನಡತೆ, ಸೃಜನಶೀಲತೆ ಹಾಗೂ ರಾಷ್ಟ್ರಪ್ರೇಮವನ್ನು
ಜಾಗೃತಿಗೊಳಿಸಿ, ನಮ್ಮ ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಲು ಬೇಕಾದ ಸಕಲ ಚಟುವಟಿಕೆಗಳನ್ನು ಒಳಗೊಂಡಿದೆ. ಇವುಗಳೊಂದಿಗೆ ಮಕ್ಕಳಿಗಾಗಿ ಪ್ರತ್ಯೇಕ ಬಸ್ಸು ವ್ಯವಸ್ಥೆ ಹಾಗೂ 5ನೇ ತರಗತಿಯಿಂದ ಮೇಲಿನ ತರಗತಿಯ ಮಕ್ಕಳಿಗಾಗಿ ವಸತಿ ವ್ಯವಸ್ಥೆಗಳನ್ನು ಕೂಡಾ ಕಲ್ಪಿಸಲಾಗಿದೆ.

 

 


ಇಲ್ಲಿ ಮಕ್ಕಳಿಗೆ L.K.G.ಯಿಂದ 9ನೇ ತರಗತಿ ವರೆಗೆ ಕಲಿಯುವ ಅವಕಾಶವಿದ್ದು, 2022-2023ನೇ ಶೈಕ್ಷಣಿಕ ವರ್ಷದ ತರಗತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ ಎಂಬುದಾಗಿ ಶಾಲೆಯ ಪತ್ರಿಕಾ ಪ್ರಕಣೆಯು ತಿಳಿಸಿರುತ್ತದೆ.

LEAVE A REPLY

Please enter your comment!
Please enter your name here