ಕುಕ್ಕುಜಡ್ಕದಲ್ಲಿ ನವಜೀವನ ಸಮಿತಿಯ ಮಾಸಿಕ ಸಭೆ

0

 

ನವಜೀವನ ಸಮಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯತ್ ಸಭಾಂಗಣ ಕುಕ್ಕುಜಡ್ಕದಲ್ಲಿ ನಡೆಯಿತು. 1568ನೇ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. 10 ಮಂದಿ ನವಜೀವನ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಮಾಹಿತಿ ಮಾರ್ಗದರ್ಶನ ನೀಡಿದರು.ಜನಜಾಗೃತಿ ತಾಲೂಕು ಅಧ್ಯಕ್ಷ ವಿಶ್ವನಾಥ್ ರೈ ಕಳಂಜ, ಸದಸ್ಯರಾದ ರಾಜಾರಾಮ್ ಭಟ್ ಬೆಟ್ಟ, ವಿಜಯಕುಮಾರ್ ಚಾರ್ಮಾತ, ಪದ್ಮನಾಭ ಶೆಟ್ಟಿ, ಮೋನಪ್ಪ ಗೌಡ ಬೊಳ್ಳಜೆ, ಯತೀಶ್ ರೈ ದುಗ್ಗಲಡ್ಕ, ಪೂವಪ್ಪ, ರವಿ ಕೊಡಪಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮೇಲ್ವಿಚಾರಕರು,ದೊಡ್ಡತೋಟ ವಲಯದ ಸೇವಾಪ್ರತಿನಿಧಿಗಳು, ನವಜೀವನ ಸದಸ್ಯರು ಉಪಸ್ಥಿತರಿದ್ದರು. ಸುಳ್ಯ ವಲಯ ಮೇಲ್ವಿಚಾರಕಿ ಹೇಮಲತಾ ಸ್ವಾಗತಿಸಿ, ಜಾಲ್ಸೂರು ಮೇಲ್ವಿಚಾರಕ ತೀರ್ಥರಾಮ್ ವಂದಿಸಿದರ.ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here