ಜಿಡೆಕಲ್ಲು ಸರಕಾರಿ ಸೌಲಭ್ಯದ ನಿರೀಕ್ಷೆಯಲ್ಲಿರುವ ಎಸ್ಸಿ ಕುಟುಂಬಕ್ಕೆ ನಗರಸಭೆ ಅಧ್ಯಕ್ಷರ ಸೂಚನೆಯಂತೆ ಅಧಿಕಾರಿಗಳ ಭೇಟಿ

0

ಪುತ್ತೂರು: ಜಿಡೆಕಲ್ಲು ಕುಸಿಯುವ ಭೀತಿಯಲ್ಲಿರುವ ಪರಿಶಿಷ್ಟ ಜಾತಿಯ ಮನೆಗೆ ಸರಕಾರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರ ಸೂಚನೆಯಂತೆ ನಗರಸಭೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್ಸಿ ಕುಟುಂಬದ ಮನೆಯೊಂದು ಕುಸಿಯುವ ಭೀತಿಯಲ್ಲಿ ಇದೆ ಎಂದು ಸುದ್ದಿಯಲ್ಲಿ ವರದಿ ಮಾಡಲಾಗಿತ್ತು. ಇದನ್ನು ಗಮನಿಸಿದ ನಗರಸಭೆ ಅಧ್ಯಕ್ಷರು ತಕ್ಷಣ ಅಧಿಕಾರಿಗಳನ್ನು ಅಲ್ಲಿಗೆ ಬೇಟಿ ನೀಡುವಂತೆ ಮತ್ತು ಮನೆಯ ದಾಖಲೆ ಪತ್ರಗಳು ಸರಿ ಇದ್ದಲ್ಲಿ ಅವರಿಗೆ ನಗರಸಭೆಯಿಂದ ಸರಕಾರಿ ಸವಲತ್ತನ್ನು ಒದಗಿಸಲಸಗುವುದು ಎಂದು ನಗರಸಭೆ ಅಧ್ಯಕ್ಷರು ತಿಳಿಸಿದ್ದಾರೆ.ನಗರಸಭೆ ಅಧ್ಯಕ್ಷರ ಕ್ಷಿಪ್ರ ಸ್ಪಂಧನೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here